ಮಾವು ಬೆಳೆಗಾರರಿಗೆ ಬೇಕಿದೆ ಸುವ್ಯಸ್ಥಿತ ಮಾರುಕಟ್ಟೆ ಜಾಲ

ಸುಭಾಸ ಆಕಳವಾಡಿ ಮಾತನಾಡಿದರು.
ಸುಭಾಸ ಆಕಳವಾಡಿ ಮಾತನಾಡಿದರು.
Published on
ಧಾರವಾಡ: ಬೆಂಗಳೂರು ಮತ್ತು ಇತರ ಮಹಾನಗರಗಳಲ್ಲಿ ಧಾರವಾಡ ಆಪೂಸ್​ ಹಣ್ಣಿನ ಬೇಡಿಕೆ ಹೆಚ್ಚುತ್ತಿದೆ. ಬೇಡಿಕೆ ಪೂರೈಸಲು ಇ- ಕಾಮರ್ಸ್​ನಂತಹ ಸುವ್ಯವಸ್ಥಿತ ಮಾರುಕಟ್ಟೆ ಜಾಲ ಮಾವು ಬೆಳೆಗಾರರಿಗೆ ಅತ್ಯಂತ ತುರ್ತಾಗಿ ಬೇಕಾಗಿದೆ ಎಂದು ಮಾವು ಬೆಳೆಗಾರರ ಬಳಗ ಧಾರವಾಡದ ಗೌರವಾಧ್ಯಕ್ಷ ಡಾ. ರಾಜೇಂದ್ರ ಪೋದ್ದಾರ ಹೇಳಿದರು.
ನಗರದ ಜಿಲ್ಲಾ ತೋಟಗಾರಿಕೆ ಇಲಾಖೆಯ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಬಳಗದ ವಿಶೇಷ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ಬಳಗದಿಂದ ಕಳೆದ 4 ವರ್ಷಗಳಿಂದ ನೇರವಾಗಿ ಗ್ರಾಹಕರಿಗೆ ಮಾವಿನ ಹಣ್ಣು ಮಾರಾಟ ಮಾಡಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ. ಹವಾಮಾನ ವೈಪರೀತ್ಯದಿಂದ ಪ್ರಸಕ್ತ ಹಂಗಾಮಿನಲ್ಲಿ ಇಳುವರಿ ಕಡಿಮೆಯಾಗಬಹುದೆಂಬ ಅಂದಾಜಿದೆ. ಆದರೂ ಉತ್ತಮ ಗುಣಮಟ್ಟದ ಹಣ್ಣನ್ನು ಉತ್ಪಾದಿಸಿ ಹೆಚ್ಚು ಬೇಡಿಕೆ ಇರುವ ಬೆಂಗಳೂರಿನಂತಹ ನಗರಗಳಿಗೆ ಸುವ್ಯವಸ್ಥಿತವಾಗಿ ಮಾರಾಟ ಮಾಡಿದರೆ ರೈತರು ಉತ್ತಮ ಆದಾಯ ನೀರಿಕ್ಷಿಸಬಹುದು ಎಂದರು.
ಬಳಗದ ಅಧ್ಯಕ್ಷ ಸುಭಾಸ ಆಕಳವಾಡಿ, ಉಪಾಧ್ಯಕ್ಷ ಪ್ರಮೋದ ಗಾಂವಕರ, ಕಾರ್ಯದಶಿರ್ ನಾಗರಾಜ ತಿಮ್ಮಾಪೂರ, ಖಜಾಂಚಿ ಗಂಗಾಧರ ಹೊಸಮನಿ, ಸಹ ಕಾರ್ಯದಶಿರ್ ವಿವೇಕಾನಂದ ದಾಸನಕೊಪ್ಪ ಮತ್ತು ಬಳಗದ ಆಡಳಿತ ಮಂಡಳಿ ಸದಸ್ಯರು ಹಾಗೂ ಮಾವು ಬೆಳೆಗಾರರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net