majetiya foundation ಅರ್ಚಕರನ್ನು ಗೌರವಿಸುವುದು ಅಗತ್ಯ

ಹುಬ್ಬಳ್ಳಿಯ majetiya foundation ಮೂರುಸಾವಿರ ಮಠದ ಪ್ರಾಂಗಣದಲ್ಲಿ ದೇವಸ್ಥಾನಗಳ ಅರ್ಚಕರು ಹಾಗೂ ಸೇವಾ ಕರ್ತರನ್ನು ಮಜೇಥಿಯಾ ಫೌಂಡೇಷನ್ ಚೇರ್ಮನ್ ಡಾ. ಜಿತೇಂದ್ರ ಮಜೇಥಿಯಾ ಮಂಗಳವಾರ ಗೌರವಿಸಿದರು.
ಹುಬ್ಬಳ್ಳಿಯ majetiya foundation ಮೂರುಸಾವಿರ ಮಠದ ಪ್ರಾಂಗಣದಲ್ಲಿ ದೇವಸ್ಥಾನಗಳ ಅರ್ಚಕರು ಹಾಗೂ ಸೇವಾ ಕರ್ತರನ್ನು ಮಜೇಥಿಯಾ ಫೌಂಡೇಷನ್ ಚೇರ್ಮನ್ ಡಾ. ಜಿತೇಂದ್ರ ಮಜೇಥಿಯಾ ಮಂಗಳವಾರ ಗೌರವಿಸಿದರು.
Published on
ಹುಬ್ಬಳ್ಳಿ: ವಿವಿಧ ಹಬ್ಬಗಳು ಈಗ majetiya foundation ಆರಂಭವಾಗುತ್ತವೆ. ಇಂಥ ಸಂದರ್ಭದಲ್ಲಿ ಸನಾತನ ಧರ್ಮದ ಸಂಪ್ರದಾಯದಂತೆ ದೇವಸ್ಥಾನದ ಅರ್ಚಕರನ್ನು ಗೌರವಿಸುವ ಅಗತ್ಯವಿದೆ ಎಂದು ಮಜೇಥಿಯಾ ಫೌಂಡೇಷನ್ ಚೇರ್ಮನ್ ಡಾ. ಜಿತೇಂದ್ರ ಮಜೇಥಿಯಾ ಅಭಿಪ್ರಾಯಪಟ್ಟರು.
ಆಷಾಢಮಾಸ ಪ್ರಾರಂಭೋತ್ಸವ ಹಾಗೂ ಮಳೆ-ಬೆಳೆಗಾಗಿ ಪ್ರಾರ್ಥಿಸಿ ಮಜೇಥಿಯಾ ಫೌಂಡೇಷನ್ ವತಿಯಿಂದ ಇಲ್ಲಿಯ ಮೂರುಸಾವಿರ ಮಠದ ಪ್ರಾಂಗಣದಲ್ಲಿ ದೇವಸ್ಥಾನಗಳ ಅರ್ಚಕರು ಹಾಗೂ ಸೇವಾ ಕರ್ತರನ್ನು ಮಂಗಳವಾರ ಗೌರವಿಸಿ ಅವರು ಮಾತನಾಡಿದರು.
ದೇವಸ್ಥಾನಗಳು ನಮ್ಮ ಸನಾತನ ಧರ್ಮದ ಪ್ರತೀಕ. ಇವುಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಸನ್ಮಾನಿಸಿದರೆ ದೇಶಕ್ಕೆಲ್ಲ ಒಳಿತಾಗುವುದೆಂಬ ನಂಬಿಕೆ ಎಲ್ಲರಿಗಿದೆ ಎಂದರು.
ಫೌಂಡೇಷನ್ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಣ್ಣೆತ್ತಿನ ಅಮಾವಾಸ್ಯೆಯಿಂದ ವಿವಿಧ ಹಬ್ಬಗಳು ಆರಂಭವಾಗುತ್ತವೆ. ದೇವಸ್ಥಾನಗಳಲ್ಲಿ ಸೇವೆ ಮಾಡುವವರನ್ನು ಸನ್ಮಾನಿಸಿದರೆ, ಮಳೆ-ಬೆಳೆ ಚೆನ್ನಾಗಿ ಬಂದು, ಎಲ್ಲರೂ ಸುಖದಿಂದ ಬಾಳುತ್ತಾರೆಂಬ ವಿಶ್ವಾಸ ನಮ್ಮೆಲ್ಲರಗಿದೆ ಎಂದರು.
ಅರ್ಚಕರು, ಸೇವಾ ಕರ್ತರಿಗೆ ಕಂಬಳಿ, ಉಲ್ಪಿ(ಆಹಾರಧಾನ್ಯ) ನೀಡಿ ಗೌರವಿಸಲಾಯಿತು.
ಉದ್ಯಮಿಗಳಾದ ಕಶ್ಯಪ ಮಜೇಥಿಯಾ, ನಿತಿನ್ ಠಕ್ಕರ, ಗಿರೀಶ ಉಪಾಧ್ಯಾಯ, ಬಾಲಕೃಷ್ಣ ಸರಾಫ, ಬಾಬುಲಾಲ್ ಚೌಧರಿ, ರಮೇಶ ಬೊಹರಾ, ರಾಜು ಠಕ್ಕರ, ಅಶೋಕ ಗೋಯಲ್, ಸುರೇಶ ಅಗರವಾಲ್, ಬ್ರಿಜ್ ಮೋಹನ್, ಶ್ರೀಧರ ಜೋಶಿ, ಸಿ.ಜಿ. ಧಾರವಾಡಶೆಟ್ಟರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net