(majethiya) ‘ಮನೆ ಮನೆಯಲ್ಲಿ ಆರೈಕೆದಾರ’ ತರಬೇತಿ

(majethiya) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ರಮೇಶ ಬಾಬು
(majethiya) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ರಮೇಶ ಬಾಬು
Published on
ಹುಬ್ಬಳ್ಳಿ: ‘ಮನೆ ಮನೆಯಲ್ಲಿ ಆರೈಕೆದಾರ’ರನ್ನು ತಯಾರಿಸುವ ಉದ್ದೇಶದಿಂದ ಉಚಿತವಾಗಿ ಪ್ರಾಯೋಗಿಕ ತರಬೇತಿ ನೀಡಲು ಮಜೇಥಿಯಾ ಫೌಂಡೇಷನ್ ಉದ್ದೇಶಿಸಿದೆ. ರೋಗಿಗಳಿಗೆ ಮನೆಯಲ್ಲಿಯೇ ಉಪಶಮನ ಮತ್ತು ವೃದ್ಧಾಪ್ಯದ ನರ್ಸಿಂಗ್ ಆರೈಕೆಗೆ ಕುಟುಂಬ ಸದಸ್ಯರನ್ನು ಅಣಿಗೊಳಿಸಲಾಗುವುದು ಎಂದು (majethiya) ಫೌಂಡೇಷನ್ ಸಂಚಾಲಕ ಡಾ. ರಮೇಶ ಬಾಬು ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅವರಿಗೆ ಶುಶ್ರೂಷೆ ಅಗತ್ಯ. ಈ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರಿಗೆ ತರಬೇತಿ ನೀಡಿದರೆ, ಅವರೇ ಆರೈಕೆ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ನಗರದ ವಿವಿಧ ಬಡಾವಣೆಗಳಲ್ಲಿ 25ಕ್ಕೂ ಹೆಚ್ಚು ಜನರು ಸೇರಿದರೆ, ಅವರಿಗೆ ತರಬೇತಿ ನೀಡಲಾಗುವುದು ಎಂದರು.
ಅಲ್ಲಿ ರೋಗಿಗಳನ್ನು ನೋಡಿಕೊಳ್ಳುವುದು, ವೃದ್ಧಾಪ್ಯ ಆರೈಕೆ ಸೇವೆ, ಉಪಶಮನ ಆರೈಕೆಯ ಮೂಲ, ಸೂಕ್ಷ್ಮ ಕಾಳಜಿ ಮತ್ತು ಸಂವಹನ ಕೌಶಲಗಳನ್ನು ಕಲಿಸಲಾಗುವುದು. ಸಮಾಜ ಮತ್ತು ಸಮುದಾಯದ ಗುಂಪುಗಳು, ಯುವಕ-ಯುವತಿಯರು, ಮಹಿಳಾ ಗುಂಪುಗಳು ತರಬೇತಿಯಲ್ಲಿ ಭಾಗವಹಿಸಬಹುದು. ಆಯಾ ಪ್ರದೇಶಕ್ಕೆ ನಮ್ಮ ತಂಡ ತೆರಳಿ ತರಬೇತಿ ನೀಡಲಿದೆ ಎಂದರು.
ವಿಶೇಷ ಆರೈಕೆಯ ತರಬೇತಿಗಳನ್ನು ಬಯಸುವವರಿಗೆ ನವನಗರದಲ್ಲಿರುವ ಹಾಸ್ಪೈಸ್ ಕೇರ್ ಸೆಂಟರ್‌ನಲ್ಲಿ ತರಬೇತಿ ನೀಡಲಾಗುವುದು. ಇದರಿಂದ ಇನ್ನಷ್ಟು ಕಲಿತು ಆರೈಕೆಗೆ ಅನುಕೂಲವಾಗಲಿದೆ ಎಂದರು.
ಫೌಂಡೇಷನ್ ಸಿಇಒ ಡಾ. ಸುನೀಲಕುಮಾರ ಕುಕನೂರ, ಪ್ರಮುಖರಾದ ಅಮರೇಶ ಹಿಪ್ಪರಗಿ, ಡಾ. ವಿ.ಬಿ. ನಿಟಾಲಿ, ಡಾ. ನಾಗರಾಜರಾವ್ ಸಾನು, ಕೆ. ಪ್ರಲ್ಹಾದರಾವ್, ಅಮೃತಲಾಲ್ ಪಟೇಲ್ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net