mailarappa badigera ತಂದೆ-ತಾಯಿಯನ್ನು ಗೌರವಿಸಿ

mailarappa badigera ರಥಶಿಲ್ಪಿ ದಿ. ಶ್ರೀ ಮೈಲಾರಪ್ಪ ಬಡಿಗೇರ
mailarappa badigera ರಥಶಿಲ್ಪಿ ದಿ. ಶ್ರೀ ಮೈಲಾರಪ್ಪ ಬಡಿಗೇರ
Published on
ಹುಬ್ಬಳ್ಳಿ: ರಥಶಿಲ್ಪಿ ದಿ. ಶ್ರೀ ಮೈಲಾರಪ್ಪ ಗಿ. ಬಡಿಗೇರರ mailarappa badigera 26ನೇ ಪುಣ್ಯಸ್ಮರಣೆ ನಿಮಿತ್ತ ಇಲ್ಲಿಯ ವಿದ್ಯಾನಗರದಲ್ಲಿ ಇತ್ತೀಚೆಗೆ ರಂಗಶಿಲ್ಪಿ ಮೈಲಾರಪ್ಪ ಬಡಿಗೇರ ಸ್ಮಾರಕ ಪ್ರತಿಷ್ಠಾನ ಉದ್ಘಾಟನೆ ಹಾಗೂ ವಚನ ಚಿಂತನೆ ಕಾರ್ಯಕ್ರಮ ಏರ್ಪಾಟಾಗಿತ್ತು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಸಂಗಮನಾಥ ಲೋಕಾಪೂರ ಉದ್ಘಾಟಿಸಿ ಮಾತನಾಡಿ, ಕಲೆ, ಚಿತ್ರಕಲೆ, ನಾಟಕ, ಶಿಲ್ಪ ಕಲೆ, ಸಂಗೀತ ಹಾಗೂ ವಿಶೇಷವಾಗಿ ಲಲಿತ ಕಲಾ ಕ್ಷೇತ್ರಕ್ಕೆ ಮೈಲಾರಪ್ಪ ಬಡಿಗೇರ ಅವರು ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಸ್ಮರಿಸಿದರು. ಸಮಾಜದಲ್ಲಿ ತಂದೆ-ತಾಯಿಯನ್ನು, ವಿಶೇಷವಾಗಿ ವೃದ್ಧರನ್ನು ಗೌರವದಿಂದ ಕಾಣುವ ಹಾಗೂ ಆರೈಕೆ ಮಾಡುವ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದರು.
ಹುಬ್ಬಳ್ಳಿ ಲಿಂಗಾಯತ ಮಹಾಸಭೆ ಅಧ್ಯಕ್ಷ ಎಸ್.ಬಿ. ಜೋಡಳ್ಳಿ ಮಾತನಾಡಿ, ಶರಣರ ವಚನ ಸಾಹಿತ್ಯವು ಜನಸಾಮಾನ್ಯರ, ಶೋಷಿತರ ಬದುಕಿನ ಧ್ವನಿಯಾಗಿದೆ ಎಂದರು.
ಹುಡಾ ಮಾಜಿ ಸದಸ್ಯ ಕಿರಣ ಪಾಟೀಲ ಕುಲಕರ್ಣಿ ಮಾತನಾಡಿದರು.
ಕಸ್ತೂರಿ ಮೈಲಾರಪ್ಪ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು.
ಪ್ರಭು ರಾಮನಾಳ ಪ್ರಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಕಸ್ತೂರಿ ಬಡಿಗೇರ, ಉಮೇಶ ನೆನಕ್ಕಿ, ಮೈತ್ರೇಯ ಬಡಿಗೇರ, ಶ್ರೇಯಸ್ ಹುಂಬಿ, ಸಾವಿತ್ರಿ ಬಡಿಗೇರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗೌರವಿಸಲಾಯಿತು.
ಷಣ್ಮುಖಪ್ಪ ಬಡಿಗೇರ, ಷಣ್ಮುಖಪ್ಪ ತಾರೀಹಾಳ, ದ್ಯಾಮಣ್ಣ ಬಡಿಗೇರ, ಡಾ. ಮಲ್ಲಿಕಾರ್ಜುನ ಕುಂದಗೋಳ , ಎಸ್.ವಿ. ಬಿದರಳ್ಳಿ, ಡಾ. ವೀರೇಶ ಹಂಡಿಗಿ, ಪಾರ್ವತಿ ಕಂಬಳಿ, ಹನುಮಂತ ಹಿರೇಮನಿ, ಮಂಜುನಾಥ ಹುಂಬಿ, ಅನೂಪ ಕದಮ್, ಪ್ರೇಮಾ ಹುಂಬಿ, ವಿಘ್ನೇಶ್ವರ ಸೂರ್ಯ, ವಿನಯ ಕುಂದಗೋಳ, ಶಶಿಕಲಾ ರಾಮನಾಳ, ಪಾರ್ವತಿ ಕುಂದಗೋಳ, ಕೆ.ಜಿ. ಗುಡಿಮನಿ, ಸಂಸ್ಕೃತಿ ಬಡಿಗೇರ ಇತರರಿದ್ದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಗುರುಸಿದ್ದಪ್ಪ ಬಡಿಗೇರ ಸ್ವಾಗತಿಸಿದರು. ಮಹಾದೇವಿ ಬಡಿಗೇರ ನಿರೂಪಿಸಿದರು. ಮಲ್ಲಿಕಾರ್ಜುನ ಕಮ್ಮಾರ ವಂದಿಸಿದರು. ಡಾ. ರಾಮು ಮೂಲಗಿ ಜಾನಪದ ಹಾಡುಗಳನ್ನು ಹಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net