mahesh tenginakai ಡಿಕೆಶಿಗೆ ಬಿಸಿ ಮುಟ್ಟಿಸಿದ ಜಮೀರ್

mahesh tenginakai ಶಾಸಕ ಮಹೇಶ ಟೆಂಗಿನಕಾಯಿ
mahesh tenginakai ಶಾಸಕ ಮಹೇಶ ಟೆಂಗಿನಕಾಯಿ
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಮಹೇಶ ಟೆಂಗಿನಕಾಯಿ ಟಾಂಗ್

ಹುಬ್ಬಳ್ಳಿ: ಸಚಿವ ಜಮೀರ್ ಆಹ್ಮದ್ ಖಾನ್ ಅವರು ಧ್ವಜಾರೋಹಣ ನಿರಾಕರಿಸುವ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಬಿಸಿ ಮುಟ್ಟಿಸಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ

mahesh tenginakai

ಚಾಟಿ ಬೀಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಆಹ್ಮದ್‌ಖಾನ್ ಅವರಿಗೆ ಮೊದಲು ಸಚಿವ ಸ್ಥಾನ ನೀಡಿರಲಿಲ್ಲ. ಸಿಎಂ ಹಾಗೂ ಜಮೀರ್ ಮಧ್ಯೆ ಮನಸ್ತಾಪವಿದೆ. ಹಾಗಾಗಿ ಧ್ವಜಾರೋಹಣಕ್ಕೆ ತೆರಳುವಂತೆ ಸಿಎಂ ಸೂಚನೆ ನೀಡಿದ್ದರೂ ಸಮಯ ಇಲ್ಲವೆಂದು ಕುಂಟು ನೆಪ ಜಮೀರ್ ಹೇಳಿದ್ದಾರೆ. ಈ ಮೂಲಕ ನೀವು (ಸಿಎಂ) ಹೇಳಿದಂತೆ ನಡೆದುಕೊಳ್ಳಲು ಆಗುವುದಿಲ್ಲ ಎಂದು ಪರೋಕ್ಷ ಟಾಂಗ್ ನೀಡಿದ್ದಾರೆ ಎಂದು ಟೆಂಗಿನಕಾಯಿ ಕುಟುಕಿದರು.
ಶಾಖೆಗೆ ಭೇಟಿ ನೀಡಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಬಗ್ಗೆ ಟೀಕೆ ಮಾಡುವ ಬದಲು ಅದರ ಶಾಖೆಗೆ ಭೇಟಿ ನೀಡಿ, ಸಂಘದ ಚಟುವಟಿಕೆಗಳನ್ನು ಅರಿತುಕೊಳ್ಳಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಆಹ್ವಾನ ನೀಡಿದರು.
ಆರ್‌ಎಸ್‌ಎಸ್ ನೂರು ವರ್ಷಗಳನ್ನು ಪೂರೈಸಿ 101ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಸಂಘದ ಬಗ್ಗೆ ತಿಳಿದುಕೊಳ್ಳಬೇಕಾದರೆ ಬೆಳಗ್ಗೆ ನಡೆಯುವ ಶಾಖೆಗೆ ಒಂದು ದಿನ ಬೆರೆಯಿರಿ. ಆಗ ಸಂಘ ಏನು ಮಾಡುತ್ತದೆ, ಮಕ್ಕಳಿಗೆ ಏನು ಕಲಿಸುತ್ತದೆ? ಎಂಬುದು ಅರ್ಥವಾಗುತ್ತದೆ ಎಂದರು.
ಬಿಜೆಪಿ ಮುಖಂಡರ ಮಕ್ಕಳೂ ಸೇರಿದಂತೆ ಎಲ್ಲ ವರ್ಗದ ಮಕ್ಕಳೂ ಆರ್‌ಎಸ್‌ಎಸ್ ಶಾಖೆಗಳಲ್ಲಿ ಭಾಗವಹಿಸುತ್ತಾರೆ. ಗೃಹ ಸಚಿವರು ತಮ್ಮ ಮಕ್ಕಳನ್ನೂ ಶಾಖೆಗೆ ಕಳುಹಿಸಿ, ಅವರಿಂದಲಾದರೂ ಸಂಘದ ಚಟುವಟಿಕೆಗಳ ಬಗ್ಗೆ ಅರಿಯಲು ಪ್ರಯತ್ನಿಸಬೇಕು. ಆರ್‌ಎಸ್‌ಎಸ್ ಟೀಕೆ ಮಾಡಿದರೆ ತಮಗೆ (ಪ್ರಿಯಾಂಕ್ ಖರ್ಗೆ) ಊಟ ಮಾಡಿದ್ದು ಅರಗುವುದಿಲ್ಲವೇ? ಎಂದು ಪ್ರಶ್ನೆ ಮಾಡಿದರು.
ರಾಜ್ಯದ ಸುರಕ್ಷತೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳತ್ತ ಗೃಹ ಸಚಿವರು ಗಮನಹರಿಸಬೇಕು. ಬೆಳಗ್ಗೆಯಿಂದ ರಾತ್ರಿವರೆಗೆ ಆರ್‌ಎಸ್‌ಎಸ್ ಬಗ್ಗೆ ಮಾತನಾಡುವುದರಿಂದ ಸಂಘಕ್ಕೆ ಯಾವುದೇ ಹಾನಿಯಾಗುವುದಿಲ್ಲ; ಬದಲಾಗಿ ಸಂಘ ಮತ್ತಷ್ಟು ಬೆಳೆಯುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net