mahesh tenginakai ಉತ್ತಮ ಪರಿಸರ ನಿರ್ಮಾಣಕ್ಕೆ ಪ್ರಯತ್ನ

mahesh tenginakai ಹುಬ್ಬಳ್ಳಿಯ ಮಧುರಾ ಎಸ್ಟೇಟ್ ಉದ್ಯಾನದಲ್ಲಿ ಮಂಗಳವಾರ ಬೃಹತ್ ಸಸಿ ನೆಡುವ ಅಭಿಯಾನಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ ನೀಡಿದರು.
mahesh tenginakai ಹುಬ್ಬಳ್ಳಿಯ ಮಧುರಾ ಎಸ್ಟೇಟ್ ಉದ್ಯಾನದಲ್ಲಿ ಮಂಗಳವಾರ ಬೃಹತ್ ಸಸಿ ನೆಡುವ ಅಭಿಯಾನಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ ನೀಡಿದರು.
Published on

ಹುಬ್ಬಳ್ಳಿ: ಎಚ್‌ಸಿಎಲ್ ಕಾರ್ಪೊರೇಷನ್‌ನ 50ನೇ ವಾರ್ಷಿಕೋತ್ಸವ ನಿಮಿತ್ತ mahesh tenginakai ಇಲ್ಲಿಯ ವಾರ್ಡ್ ನಂ. 44ರ ಮಧುರಾ ಎಸ್ಟೇಟ್ ಉದ್ಯಾನದಲ್ಲಿ ಪರಿಸರ ಜಾಗೃತಿ, ನೈರ್ಮಲ್ಯ ಮತ್ತು ಹಸಿರು ಹೊದಿಕೆಯನ್ನು ಹೆಚ್ಚಿಸುವ ಸದುದ್ದೇಶದಿಂದ ಬೃಹತ್ ಸಸಿ ನೆಡುವ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಶಾಸಕ ಮಹೇಶ ಟೆಂಗಿನಕಾಯಿ ಸಸಿ ನೆಟ್ಟು ಮಾತನಾಡಿ, ಒಂದೂವರೆ ಎಕರೆಯಲ್ಲಿ ಫಾರೆಸ್ಟ್ ಗಾರ್ಡನ್ ತರಹ ಉದ್ಯಾನ ನಿರ್ಮಾಣವಾಗಲಿದೆ. ಜನರಿಗೆ ಉತ್ತಮ ಪರಿಸರ ನಿರ್ಮಾಣ ಮಾಡಲು ಈ ವಾರ್ಡ್‌ನಲ್ಲಿ ಪ್ರಯತ್ನಿಸಲಾಗುತ್ತಿದೆ. ಇದರಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಪಾರ್ಕ್ ಮಾಡಲಾಗಿದೆ ಎಂದರು.
ಪಾಲಿಕೆಯ ಆಯುಕ್ತ ಡಾ. ರುದ್ರೇಶ ಘಾಳಿ, ಪಾಲಿಕೆ ಸದಸ್ಯೆ ಉಮಾ ಮುಕುಂದ, ಪ್ರಮುಖರಾದ ಉದಯ ಶೆಟ್ಟಿ, ವಿನೋದ ರೇವಣಕರ, ಸ್ನೇಹಾ ಅಂಥಾಲ್, ವಿನೋದ ಪಟವಾ, ನಿಖಿಲ್ ವಂಗಿ, ಸುನೀಲ್ ಗುಮಾಸ್ತೆ, ಸೋಮನಾಥ ಮೆಹರವಾಡೆ, ವೈ.ಬಿ. ಪಾಟೀಲ, ಎಚ್‌ಸಿಎಲ್ ಕಾರ್ಪೊರೇಷನ್‌ನ ಪ್ರತಿನಿಧಿಗಳು, ಸ್ವಚ್ಛತಾ ಆಂದೋಲನ ಪರಿವಾರ ಮತ್ತು ಸ್ಕೇಟರ್ಸ್ ತಂಡದ ಸದಸ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net