ಹುಬ್ಬಳ್ಳಿಯ mahesh tenginakai ಗೋಪನಕಪ್ಪನಕೊಪ್ಪದಲ್ಲಿನ ಮತದಾರರ ನೋಂದಣಿ ಕೇಂದ್ರವನ್ನು ಶಾಸಕ ಮಹೇಶ ಟೆಂಗಿನಕಾಯಿ ಶನಿವಾರ ಉದ್ಘಾಟಿಸಿದರು.
Published on:
Copied
Follow Us
ಹುಬ್ಬಳ್ಳಿ: ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂ. 40 ಗೌಡ್ರ ಹೋಳಿ, ಗೋಪನಕೊಪ್ಪ, ಸಿದ್ಧರಾಮನಗರ, ಇಂದ್ರಪ್ರಸ್ಥ ನಗರ, ಜೆ.ಸಿ. ನಗರ ರೋಡ್‌ನಲ್ಲಿ ಬಿಜೆಪಿ ವತಿಯಿಂದ ಸ್ಥಾಪಿಸಿರುವ ಮತದಾರರ ನೋಂದಣಿ ಕೇಂದ್ರಗಳನ್ನು ಶನಿವಾರ mahesh tenginakai ಉದ್ಘಾಟಿಸಲಾಯಿತು.
ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸಿ ಮಾತನಾಡಿ, ಈಗಾಗಲೇ ದೇಶದ ಅನೇಕ ರಾಜ್ಯಗಳಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಮುಗಿದು ಯಶಸ್ವಿಯಾಗಿದೆ. ಈಗ ಕರ್ನಾಟಕದಲ್ಲಿ ನಡೆಯುತ್ತಿದೆ. ಬಾಂಗ್ಲಾದೇಶದವರು ನಮ್ಮ ರಾಜ್ಯದಲ್ಲಿ ಹೆಸರು ನೋಂದಣಿ ಮಾಡಿಸುತ್ತಿರುವ ಸಂಚು ನಡೆದಿದೆ. ಅದಕ್ಕೆ ಎಲ್ಲರೂ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಎಸ್‌ಐಆರ್ ಅತ್ಯಂತ ಮಹತ್ವವಾದದು. ಎಲ್ಲ ವಾರ್ಡ್‌ಗಳ ಮನೆ ಮನೆಗಳಿಗೆ ಬಿಎಲ್‌ಒಗಳು ತೆರಳಿ ಪರಿಷ್ಕರಣೆ ಮಾಡುವರು. ಏನಾದರೂ ಸಮಸ್ಯೆಗಳಿದ್ದರೆ ನೋಂದಣಿ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದರು ತಿಳಿವಳಿಕೆ ಮೂಡಿಸಿದರು.
ಸೆಂಟ್ರಲ್ ಕ್ಷೇತ್ರದ ಬಿಎಲ್‌ಒ ಪ್ರಶಾಂತ ಜಾಧವ, ಪಾಲಿಕೆ ಸದಸ್ಯರಾದ ಎಂ.ವೈ. ನರಗುಂದ, ಬೀರಪ್ಪ ಖಂಡೇಕರ, ಕೃಷ್ಣ ಗಂಡಗಾಳೇಕರ, ಪ್ರಕಾಶ ಕ್ಯಾರಕಟ್ಟಿ ಇತರರಿದ್ದರು.