mahadev drama ಪ್ರೇಕ್ಷಕರ ಗಮನ ಸೆಳೆದ ಮೈಲಾರ ಮಹಾದೇವ

mahadev drama ಹುಬ್ಬಳ್ಳಿಯ ಉಣಕಲ್ಲ ಸರ್ಕಾರಿ ಶಾಲೆಯಲ್ಲಿ ಏರ್ಪಡಿಸಿದ್ದ ಅಭಿನಯ ಕಾರ್ಯಾಗಾರ ಸಮಾರೋಪದಲ್ಲಿ ಮೈಲಾರ ಮಹಾದೇವ ನಾಟಕ ಪ್ರದರ್ಶಿಸಿದ ಮಕ್ಕಳು.
mahadev drama ಹುಬ್ಬಳ್ಳಿಯ ಉಣಕಲ್ಲ ಸರ್ಕಾರಿ ಶಾಲೆಯಲ್ಲಿ ಏರ್ಪಡಿಸಿದ್ದ ಅಭಿನಯ ಕಾರ್ಯಾಗಾರ ಸಮಾರೋಪದಲ್ಲಿ ಮೈಲಾರ ಮಹಾದೇವ ನಾಟಕ ಪ್ರದರ್ಶಿಸಿದ ಮಕ್ಕಳು.
Published on

ಹುಬ್ಬಳ್ಳಿ:

mahadev drama

ಉಣಕಲ್​ ಶಾಸಕರ ಸರ್ಕಾರಿ ಮಾದರಿ ಪ್ರಾಥಮಿಕ ಹಾಗೂ ಉನ್ನತಿಕರಿಸಿದ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಅಭಿನಯ ಕಾರ್ಯಾಗಾರ ಸಮಾರೋಪ ಹಾಗೂ ತರಬೇತಿ ಪಡೆದ ಮಕ್ಕಳಿಂದ ಮೈಲಾರ ಮಹಾದೇವ ನಾಟಕ ಪ್ರದರ್ಶನ ನೋಡುಗರ ಗಮನ ಸೆಳೆಯಿತು.

ಕ್ರಾಂತಿಕಾರಿ ಮೈಲಾರ ಮಹದೇವರ ಜೀವನ ಆಧಾರಿತ ನಾಟಕದ ವಿಭಿನ್ನ ಪಾತ್ರಗಳಲ್ಲಿ ಮೂವತ್ತಕ್ಕೂ ಹೆಚ್ಚು ಮಕ್ಕಳು ಅಭಿನಯಿಸಿ ಮನಸೂರೆಗೊಂಡರು. ಪಠ್ಯಆಧಾರಿತ ಈ ನಾಟಕಕ್ಕೆ ರಂಗ ರೂಪ ಹಾಗೂ ನಿರ್ದೇಶನ ನೀಡಿದ ಶ್ರೀಕಾಂತ ನವಲಗಿರಿ ಅವರನ್ನು ಸನ್ಮಾನಿಸಲಾಯಿತು.
ಧಾರವಾಡ ರಂಗಾಯಣ ಮಾಜಿ ನಿರ್ದೇಶಕ ಸುಭಾಸ ನರೇಂದ್ರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿದ್ದ ವೆಂಕಣ್ಣ ಕಿರೇಸೂರ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಹುಬ್ಬಳ್ಳಿ ಗ್ರಾಮೀಣ ಸಮನ್ವಯಾಧಿಕಾರಿ ಸಂತೋಷ ದಂಡಗಲ್​, ಎಸ್​.ಡಿ.ಎಂ.ಸಿ. ಅಧ್ಯಕ್ಷ ರಂಗನಗೌಡ ಚಿಕ್ಕನಗೌಡ್ರ, ಪ್ರಧಾನಗುರು ಜಿ.ಟಿ. ಕರೆಪ್ಪನವರ, ಕಾರ್ಯಾಗಾರದ ಸಂಚಾಲಕಿ ವೀಣಾ ಅಠವಲೆ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net