ಹುಬ್ಬಳ್ಳಿ: ಸ್ವಚ್ಛತಾ ಅಭಿಯಾನ, madhura estate ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನ ನಿಮಿತ್ತ ಸ್ವಚ್ಛತಾ ಆಂದೋಲನಾ ಪರಿವಾರವತಿಯಿಂದ ಇಲ್ಲಿಯ ಕೇಶ್ವಾಪುರದ ಮಧುರಾ ಎಸ್ಟೇಟ್ ಪಾರ್ಕ್‌ನಲ್ಲಿ ಭಾನುವಾರ 33ನೇ ಸ್ವಚ್ಛತಾ ಅಭಿಯಾನ ನಡೆಯಿತು.
ಪಾಲಿಕೆ ಸದಸ್ಯೆ ಉಮಾ ಮುಕುಂದ ಮಾತನಾಡಿ, ಉದ್ಯಾನಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಜವಾಬ್ದಾರಿ. ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನಂತೆ ತಾಯಿ ಹೆಸರಿನಲ್ಲಿ ಒಂದು ಮರವನ್ನು ನೆಡಿ ಎಂದು ಸಲಹೆ ನೀಡಿದರು.
ವಿನೋದಕುಮಾರ ಪಟ್ವಾ ಮಾತನಾಡಿ, ಸ್ವಚ್ಛತೆ ಕೇವಲ ಅಭಿಯಾನಗಳಿಗೆ ಸೀಮಿತವಾಗದೆ, ಪ್ರತಿಯೊಬ್ಬರ ದೈನಂದಿನ ಅಭ್ಯಾಸ ಹಾಗೂ ಸಾಮೂಹಿಕ ಜವಾಬ್ದಾರಿಯಾಗಬೇಕು ಎಂದರು.