ಮದೀನಾ (madeena) ಬಸ್ ಅಗ್ನಿ ಅವಘಡದಲ್ಲಿ ಮೃತಪಟ್ಟ ಹುಬ್ಬಳ್ಳಿಯ ಅಬ್ದುಲ್ ಗನಿ ಶಿರಹಟ್ಟಿ ಅವರ ನಿವಾಸಕ್ಕೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಗುರುವಾರ ಭೇಟಿ ನೀಡಿ ಕುಟುಂಬದವರಿಗೆ ವೈಯಕ್ತಿಕವಾಗಿ 10 ಲಕ್ಷ ರೂ. ಚೆಕ್ ನೀಡಿದರು.
Published on:
Copied
Follow Us
ಹುಬ್ಬಳ್ಳಿ: ಮದೀನಾ (madeena) ಬಸ್ ಅಗ್ನಿ ಅವಘಡದಲ್ಲಿ ಮೃತಪಟ್ಟ ಹುಬ್ಬಳ್ಳಿಯ ಅಬ್ದುಲ್ ಗನಿ ಶಿರಹಟ್ಟಿ ಅವರ ನಿವಾಸಕ್ಕೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಗುರುವಾರ ಭೇಟಿ ನೀಡಿ ಕುಟುಂಬದವರಿಗೆ ವೈಯಕ್ತಿಕವಾಗಿ 10 ಲಕ್ಷ ರೂ. ಚೆಕ್ ನೀಡಿದರು.
ನಂತರ ಮಾತನಾಡಿದ ಸಚಿವರು, ಹಜ್ ಕಮಿಟಿ ವತಿಯಿಂದಲೂ ಈ ಕುಟುಂಬಕ್ಕೆ ಐದು ಲಕ್ಷ ರೂ. ನೆರವು ಸಿಗಲಿದೆ ಎಂದರು.
ಇದೇ ವೇಳೆ ಗನಿ ಅವರ ಪುತ್ರ ಮೌಲಾ ಅವರಿಗೆ ವಸತಿ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಹುದ್ದೆಗೆ ನೇಮಕಾತಿ ಪತ್ರ ವಿತರಿಸಿದರು.
ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ, ಹೆಸ್ಕಾಂ ಅಧ್ಯಕ್ಷ ಅಜೀಂಪೀರ ಖಾದ್ರಿ, ಮುಖಂಡರಾದ ದೀಪಕ ಚಿಂಚೋರೆ, ಅನ್ವರ್ ಬಾಷಾ, ಅಲ್ತಾಫ್ ಹಳ್ಳೂರ ಇತರರು ಇದ್ದರು.