ಕಲಾವಿಭಾಗದಲ್ಲಿ ಓದುತ್ತಿದ್ದ ಯುವತಿಯನ್ನು ಐದು ವರ್ಷದ ಹಿಂದೆ ಇವೆಂಟ್‌ಒಂದರಲ್ಲಿ ಮುಫೀಜ್ ಪರಿಚಯ ಮಾಡಿಕೊಂಡಿದ್ದ. ಪೋನ್‌ನಲ್ಲಿ ಮಾತನಾಡುವುದು, ಇನ್‌ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಮಾಡುತ್ತ ಹತ್ತಿರವಾಗಿದ್ದ. ಜತೆಗೆ ಓಡಾಡುತ್ತಿದ್ದ ವೇಳೆ ಗದಗ ರಸ್ತೆಯ ಸೇತುವೆ ಬಳಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗುವ ಉದ್ದೇಶದಿಂದ ಮೈಕೈ ಮುಟ್ಟಿ, ಮುತ್ತಿ ಕೊಟ್ಟಿದ್ದ. ಇದರ ಫೋಟೋ ಮತ್ತು ವಿಡಿಯೋ ಮಾಡಿಕೊಂಡಿದ್ದ. ಯರಿಗಾದರೂ ಹೇಳಿದರೆ ನಿನ್ನನ್ನು ಉಳಿಸುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ, ನಾನು ಕರೆದಾಗ ಬರಬೇಕು ಎಂದು ಧಮಕಿ ಹಾಕಿದ್ದ ಎಂದು ಯುವತಿ ದೂರಿನಲ್ಲಿ ವಿವರಿಸಿದ್ದಾಳೆ.