ಎಸಿಎಫ್​ ಮನೆ ಮೇಲೆ ಲೋಕಾಯುಕ್ತ ದಾಳಿ

ಎಸಿಎಫ್​ ಮನೆ
ಎಸಿಎಫ್​ ಮನೆ
Published on
ಧಾರವಾಡ: ಶಿವಮೊಗ್ಗದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ಕಿರಣ್​ ಅಂಗಡಿ ಅವರ ಮನೆ, ಕೈಗಾರಿಕಾ ಘಟಕಗಳು ಮತ್ತು ಅಳ್ನಾವರ ರಸ್ತೆಯಲ್ಲಿರುವ ಫಾರಂ ಹೌಸ್​ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ದಾಳಿ ನಡೆಸಿದ್ದಾರೆ.
ಇಲ್ಲಿನ ದೊಡ್ಡನಾಯಕನಕೊಪ್ಪದ ಮನೆ, ಬೇಲೂರು ಕೈಗಾರಿಕಾ ಪ್ರದೇಶದ 2 ಘಟಕಗಳು ಹಾಗೂ ಅಳ್ನಾವರ ತಾಲೂಕಿನ ಕೋಗಿಲಗೆರೆಯ ಫಾರಂ ಹೌಸ್​ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದರು. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ದೂರಿನ ಮೇರೆಗೆ ದಾಳಿ ನಡೆದಿದ್ದು, ಅಧಿಕಾರಿಗಳ ತಂಡ ಸಂಜೆವರೆಗೆ ಆಸ್ತಿಯ ಕುರಿತ ದಾಖಲೆಗಳನ್ನು ಪರಿಶೀಲಿಸಿದರು.
5 ಕಡೆಗಳಲ್ಲಿ ನಡೆದ ದಾಳಿ ವೇಳೆ 1 ಎಕರೆ ಜಮೀನು, 1 ಮನೆ ಸೇರಿ 1.52 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 4.92 ಲಕ್ಷ ಮೌಲ್ಯದ ಚಿನ್ನಾಭರಣ, 52,350 ರೂ. ಮೌಲ್ಯದ ಬೆಳ್ಳಿಯ ಆಭರಣ ಸೇರಿ 1.94 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net