ಭೂಮಾಪನ ಇಲಾಖೆ ನೌಕರನ ಮನೆ ಮೇಲೆ `ಲೋಕಾ' ದಾಳಿ

S.F. Siddanagoudar House
S.F. Siddanagoudar House
Published on
ಧಾರವಾಡ: ನಗರದ ಎಡಿಎಲ್‌ಆರ್ ಕಚೇರಿಯ ಭೂಮಾಪನ ಮೇಲ್ವಿಚಾರಕ ಎಸ್.ಎಫ್. ಸಿದ್ದನಗೌಡರ ಅವರ ಮನೆ, ಕಚೇರಿ ಸೇರಿ 4 ಕಡೆಗಳಲ್ಲಿ ಲೋಕಾಯುಕ್ತ ಅಽಕಾರಿಗಳ ತಂಡ ಗುರುವಾರ ದಾಳಿ ನಡೆಸಿದೆ.
ಭೂ ದಾಖಲೆಗಳು ಮತ್ತು ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಭೂಮಾಪಕನ ಮೇಲ್ವಿಚಾರಕ ಆಗಿರುವ ಎಸ್.ಎಫ್. ಸಿದ್ದನಗೌಡರ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಶಂಕೆಯ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ದಾಳಿ ನಡೆದಿದೆ. ಇಲ್ಲಿನ ಭಾರತಿನಗರದ ಮನೆ, ಮುರಗೋಡದಲ್ಲಿರುವ ಮನೆ, ಎಡಿಎಲ್‌ಆರ್ ಕಚೇರಿ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ದಾಳಿ ವೇಳೆ 3 ನಿವೇಶನಗಳು, ಒಂದು ಮನೆ, 3 ಎಕರೆ ಕೃಷಿ ಭೂಮಿ ಸೇರಿ 2,08,69,000 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ.
82,840 ರೂಪಾಯಿ ನಗದು, 35,41,000 ರೂ. ಮೌಲ್ಯದ ಚಿನ್ನ- ಬೆಳ್ಳಿಯ ಆಭರಣ, 14.90 ಲಕ್ಷ ಮೌಲ್ಯದ ವಾಹನಗಳು, 50 ಲಕ್ಷ ರೂ. ಮೌಲ್ಯದ ಇತರ ವಸ್ತುಗಳ ಚರಾಸ್ತಿ ಪತ್ತೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net