(lokayukta) ಲಂಚ ಪಡೆಯುತ್ತಿದ್ದ ಹೀನಾ ಲೋಕಾ ಬಲೆಗೆ

ಹೀನಾ ಕೌಸರ್ ಕುರಹಟ್ಟಿ ಶನಿವಾರ ಲೋಕಾಯುಕ್ತ (lokayukta) ಬಲೆಗೆ
ಹೀನಾ ಕೌಸರ್ ಕುರಹಟ್ಟಿ ಶನಿವಾರ ಲೋಕಾಯುಕ್ತ (lokayukta) ಬಲೆಗೆ
Published on
ಹುಬ್ಬಳ್ಳಿ: ರೊಟ್ಟಿ ಕೇಂದ್ರದ ಲೈಸೆನ್ಸ್‌ಗೆ ಲಂಚ ಪಡೆಯುವ ವೇಳೆ ಹು-ಧಾ ಮಹಾನಗರ ಪಾಲಿಕೆ ವಲಯ 1ರ ಆರೋಗ್ಯ ನಿರೀಕ್ಷಕಿ ಹೀನಾ ಕೌಸರ್ ಕುರಹಟ್ಟಿ ಶನಿವಾರ ಲೋಕಾಯುಕ್ತ (lokayukta) ಬಲೆಗೆ ಬಿದ್ದಿದ್ದಾರೆ.
ಮಳೆಪ್ಪ ತಳವಾರ ಎನ್ನುವವ ವ್ಯಕ್ತಿ ತಮ್ಮ ಪತ್ನಿ ಹೆಸರಿನಲ್ಲಿ ರೊಟ್ಟಿ ಕೇಂದ್ರ ತೆರೆಯಲು ಉದ್ದೇಶಿಸಿದ್ದರು. ವಲಯ 1ರ ಆರೋಗ್ಯ ನಿರೀಕ್ಷಕಿ ಹೀನೌ ಕೌಸರ್ ಅವರನ್ನು ಭೇಟಿಯಾಗಿದ್ದರು. ಕೇಂದ್ರ ತೆರೆಲಯ ಲೈಸೆನ್ಸ್ ಪಡೆಯಬೇಕು. ಅದಕ್ಕೆ 4,500 ರೂ. ಲಂಚ ಹಣ ಕೊಡಬೇಕು ಎಂದಿದ್ದರು. ಮಳೆಪ್ಪ ಮೊದಲು ಸಾವಿರ ರೂ. ಮುಂಗಡ ನೀಡಿದ್ದರು. ಉಳಿದ 3,500 ರೂ. ಮಳೆಪ್ಪ ಅವರು ಹೀನಾ ಕೌಸರ್ ಅವರಿಗೆ ಕೊಡುವ ವೇಳೆ ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ಹಾಗೂ ಡಿವೈಎಸ್‌ಪಿ ವಿ.ಎನ್. ಪಾಟೀಲ ನೇತೃತ್ವದ ತಂಡ ದಾಳಿ ಮಾಡಿದೆ. ಹೀನಾ ಕೌಸರ್ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net