ಲೋಕೋ ಪೈಲಟ್ ​ಗಳಿಂದ (Loco pilots) ಉಪವಾಸ ಸತ್ಯಾಗ್ರಹ

ಹುಬ್ಬಳ್ಳಿಯಲ್ಲಿ ಮಂಗಳವಾರ ಲೋಕೋ ಪೈಲಟ್​ಗಳ (Loco pilots) ಉಪವಾಸ ಸತ್ಯಾಗ್ರಹದಲ್ಲಿ ಟಿ. ಸಾಬು ಮಾತನಾಡಿದರು.
ಹುಬ್ಬಳ್ಳಿಯಲ್ಲಿ ಮಂಗಳವಾರ ಲೋಕೋ ಪೈಲಟ್​ಗಳ (Loco pilots) ಉಪವಾಸ ಸತ್ಯಾಗ್ರಹದಲ್ಲಿ ಟಿ. ಸಾಬು ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಅಗತ್ಯ ರಜೆಗಳನ್ನು ಸಕಾಲಕ್ಕೆ ನೀಡಬೇಕು,
  • ಕರ್ತವ್ಯದ ಸಂದರ್ಭದಲ್ಲಿ ಆಗುವ ಕಿರುಕುಳ ತಪ್ಪಿಸಬೇಕು.
  • ಹೆಡ್​ಕ್ವಾರ್ಟರ್ ವಿಶ್ರಾಂತಿಯನ್ನು ನೀಡಬೇಕು.
ವಾರದಲ್ಲಿ 30 ತಾಸುಗಳ ವಿಶ್ರಾಂತಿ ಜತೆಗೆ 16 ತಾಸುಗಳ ಹೆಡ್​ಕ್ವಾರ್ಟರ್ ವಿಶ್ರಾಂತಿಯನ್ನು ನೀಡಬೇಕು. ನಿರಂತರ ರಾತ್ರಿ ಪಾಳಿ ಕರ್ತವ್ಯವನ್ನು ತಗ್ಗಿಸಬೇಕು. ಕರ್ತವ್ಯದ ಸಂದರ್ಭದಲ್ಲಿ ಆಗುವ ಕಿರುಕುಳ ತಪ್ಪಿಸಬೇಕು. ಬಹಳ ವರ್ಷಗಳಿಂದ ಸ್ಥಗಿತಗೊಂಡಿರುವ ಬಡ್ತಿಗಗಳಿಗೆ ಚಾಲನೆ ನೀಡಬೇಕು.
ಹುಬ್ಬಳ್ಳಿಯಲ್ಲಿ ರೈಲ್ವೆ ಸಿಬ್ಬಂದಿಯ ವಾಹನಗಳಿಗೆ ರ್ಪಾಂಗ್ ಸೌಲಭ್ಯ ಕಲ್ಪಿಸಬೇಕು. ಲೋಕೋ ಪೈಲಟ್​ಗಳಿಗೆ ಕನಿಷ್ಠ ಶೇ. 15ರಷ್ಟು ರಜೆ ಸೌಲಭ್ಯ ನೀಡಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು ಎಂದು ಆಗ್ರಹಿಸಿದರು.
ಅಸೋಸಿಯೇಶನ್​ನ ಅಖಿಲ ಭಾರತೀಯ ಉಪಾಧ್ಯಕ್ಷ ಸಿ. ಸನೇಶ್, ವಿಭಾಗೀಯ ಅಧ್ಯಕ್ಷ ರಾಜೇಂದ್ರ ಸಿಂಗ್, ಕಾರ್ಯದರ್ಶಿ ಟಿ. ಸಾಬು ಮಾತನಾಡಿ, ಬೇಡಿಕೆಗಳ ಈಡೇರಿಕೆಗೆ ತಕ್ಷಣ ಸ್ಪಂದಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕುಮಾರ ವೇಲನ್, ಎಂ. ಓಜಾ, ಮಹೇಶ ಪತ್ತಾರ, ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net