ವಯಸ್ಕ ನಿರಕ್ಷರಿಗಳಿಗೆ ಸಾಕ್ಷರ ದಾಸೋಹ

ಧಾರವಾಡ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಕಾರ್ಯಕ್ರಮ ಸಹಾಯಕ ಕೆ.ಬಿ. ಕುರಹಟ್ಟಿ ಅವರಿಂದ ಕಲಿಕಾ ಕೇಂದ್ರಗಳ ಪರಿವೀಕ್ಷಣೆ.
ಧಾರವಾಡ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಕಾರ್ಯಕ್ರಮ ಸಹಾಯಕ ಕೆ.ಬಿ. ಕುರಹಟ್ಟಿ ಅವರಿಂದ ಕಲಿಕಾ ಕೇಂದ್ರಗಳ ಪರಿವೀಕ್ಷಣೆ.
Published on

ಪ್ರಮುಖ ಮುಖ್ಯಾಂಶಗಳು

  • ವಯಸ್ಕ ಅನಕ್ಷರಸ್ಥರನ್ನು ಗುರುತಿಸಿ ಕನಿಷ್ಠ ಓದು- ಬರಹ ಕಲಿಸಲು ಕೇಂದ್ರ- ರಾಜ್ಯ ಸರ್ಕಾರಗಳ ಕಾರ್ಯಕ್ರಮ
  • 1,000 ಗ್ರಾಮ ಪಂಚಾಯಿತಿಗಳ ಸಾಕ್ಷರತಾ ಕಾರ್ಯಕ್ರಮ
  • ನವಭಾರತ ಸಾಕ್ಷರತಾ ಕಾರ್ಯಕ್ರಮ
  • ಮೂಲ ಸಾಕ್ಷರತಾ ಕಾರ್ಯಕ್ರಮ
ಧಾರವಾಡ: ವಯಸ್ಕ ಅನಕ್ಷರಸ್ಥರನ್ನು ಗುರುತಿಸಿ ಕನಿಷ್ಠ ಓದು- ಬರಹ, ಸರಳ ಲೆಕ್ಕ ಕಲಿಸಲು ಕೇಂದ್ರ- ರಾಜ್ಯ ಸರ್ಕಾರಗಳು ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿವೆ. ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯಡಿ ಇಂಥ 3 ಕಾರ್ಯಕ್ರಮಗಳು ಜಾರಿಯಲ್ಲಿದ್ದು, ನಿರಕ್ಷರಿಗಳು ನವಸಾಕ್ಷರಾಗಿ ಹೊರಹೊಮ್ಮುತ್ತಿದ್ದಾರೆ.
ಅಕ್ಷರ ಜ್ಞಾನವಿಲ್ಲದ ವಯಸ್ಕರನ್ನು ನವಸಾಕ್ಷರರನ್ನಾಗಿ ಮಾಡಲು ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ರಾಜ್ಯಾದ್ಯಂತ "1,000 ಗ್ರಾಮ ಪಂಚಾಯಿತಿಗಳ ಸಾಕ್ಷರತಾ ಕಾರ್ಯಕ್ರಮ'ವನ್ನು ಬಜೆಟ್​ನಲ್ಲಿ ಘೋಷಿಸಲಾಗಿತ್ತು. ಇದು ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದ್ದು, ಜತೆಗೆ "ನವಭಾರತ ಸಾಕ್ಷರತಾ ಕಾರ್ಯಕ್ರಮ' ಮತ್ತು ಜಿಲ್ಲಾ ಪಂಚಾಯಿತಿ ಲಿಂಕ್​ ಡಾಕ್ಯುಮೆಂಟ್​ ಮೂಲ ಸಾಕ್ಷರತಾ ಕಾರ್ಯಕ್ರಮವೂ ಚಾಲ್ತಿಯಲ್ಲಿದೆ.
2024- 25ನೇ ಸಾಲಿನಲ್ಲಿ ಜಿ.ಪಂ. ಲಿಂಕ್​ ಡಾಕ್ಯುಮೆಂಟ್​ ಮೂಲ ಸಾಕ್ಷರತಾ ಕಾರ್ಯಕ್ರಮದ ಅಡಿ ಕಲಿಕಾ ಪ್ರಕ್ರಿಯೆ ನಡೆಸಿ ಜಿಲ್ಲೆಯ 23 ಗ್ರಾ.ಪಂ.ಗಳ 11,828 ಜನರನ್ನು ಸಾಕ್ಷರರೆಂದು ಘೋಷಿಸಲಾಗಿದೆ. "1,000 ಗ್ರಾಮ ಪಂಚಾಯಿತಿಗಳ ಸಾಕ್ಷರತಾ ಕಾರ್ಯಕ್ರಮ'ದಡಿ 24 ಗ್ರಾ.ಪಂ. ವ್ಯಾಪ್ತಿಯ 14,365 ಅನಕ್ಷರಸ್ಥರಿಗೆ ಕಲಿಕೆ ಚಾಲ್ತಿಯಲ್ಲಿವೆ. ಇಲಾಖೆಯಿಂದ ಸದ್ಯದಲ್ಲೇ ಅಂತಿಮ ಪರೀೆ ನಡೆಸಿ 14,365 ಜನರನ್ನು ನವಸಾಕ್ಷರರೆಂದು ಘೋಷಿಸಲಾಗುತ್ತದೆ. ಮೂರೂ ಕಾರ್ಯಕ್ರಮಗಳಡಿ ಜಿಲ್ಲೆಯ 72 ಗ್ರಾ.ಪಂ.ಗಳು ಸಂರ್ಪೂಣ ಸಾಕ್ಷರ ಗ್ರಾಮಗಳೆಂದು ಘೋಷಣೆಯಾಗಿವೆ.
* ಆಯ್ಕೆ, ಕಲಿಕೆ ಹೇಗೆ...?
ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾ.ಪಂ. ಸಹಕಾರದಿಂದ ಸಮೀೆ ನಡೆಸಿ ಅನಕ್ಷರಸ್ಥರನ್ನು ಗುರುತಿಸಲಾಗಿದೆ. 20 ಜನರಿಗೆ ಒಬ್ಬರಂತೆ ಅದೇ ಗ್ರಾಮದ ಕನಿಷ್ಠ 10ನೇ ತರಗತಿ ಪಾಸಾದವರನ್ನು ಬೋಧಕರೆಂದು ನೇಮಕ ಮಾಡಲಾಗಿದೆ. ಮೂರೂವರೆ ತಿಂಗಳ ಒಂದು ಬ್ಯಾಚ್​ಗೆ ಕಲಿಸಲು ಬೋಧಕರಿಗೆ ಇಲಾಖೆಯಿಂದ 2,500 ರೂ. ಪ್ರೋತ್ಸಾಹಧನ ನಿಗದಿಪಡಿಸಲಾಗಿದೆ. ಕಲಿಕಾಥಿರ್ಗಳಿಗೆ ಅನುಕೂಲವಾಗುವ ಸಮಯ, ಸ್ಥಳ ನಿಗದಿಪಡಿಸಿ ದೇವಸ್ಥಾನ, ಸಮುದಾನ ಭವನದಲ್ಲಿ ಕಲಿಕೆ ನಡೆಯುತ್ತಿದೆ.
2025- 26ನೇ ಸಾಲಿನ ಗುರಿ:
2025- 26ನೇ ಸಾಲಿನಲ್ಲಿ 19 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಸಮೀೆ ಮುಗಿದಿದ್ದು, 12,000 ಅನಕ್ಷರಸ್ಥರನ್ನು ಗುರುತಿಸಲಾಗಿದೆ. ಸದ್ಯದಲ್ಲೇ ಕಲಿಕಾ ಕೇಂದ್ರಗಳು ಆರಂಭಗೊಳ್ಳಲಿದೆ ಎನ್ನುತ್ತಾರೆ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಕಾರ್ಯಕ್ರಮ ಸಹಾಯಕ ಕೆ.ಬಿ. ಕುರಹಟ್ಟಿ.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಜಯಶ್ರೀ ವರೂರ ಅವರು ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡುವ ಕಾರ್ಯಕ್ರಮಗಳ ಹೊಣೆ ಹೊತ್ತಿದ್ದಾರೆ. ಡಿಎಸ್​ಇಆರ್​ಟಿ ಲೋಕ ಶಿಕ್ಷಣ ವಿಭಾಗ ಬೆಂಗಳೂರು, ಜಿಲ್ಲಾಡಳಿತ, ಜಿ.ಪಂ. ಸಿಇಒ ಮತ್ತು ಉಪ ಕಾರ್ಯದಶಿರ್ಗಳ ಮಾರ್ಗದರ್ಶನ, ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಕಾರ್ಯಕ್ರಮಗಳು ಪ್ರಗತಿ ಕಾಣುತ್ತಿವೆ.
ತಮ್ಮ ಗ್ರಾಮದ ಅನಕ್ಷರಸ್ಥರಿಗೆ ಕನಿಷ್ಠ ಅಕ್ಷರ ಜ್ಞಾನ ಕಲಿಸುವ ಬೋಧಕರಿಗೆ ನವಲಗುಂದ ತಾಲೂಕಿನ ಹೆಬ್ಬಾಳ ಗ್ರಾ.ಪಂ. ಆಡಳಿತ ಮಂಡಳಿಯು ಹೆಚ್ಚುವರಿಯಾಗಿ 1,500 ರೂ. ಪ್ರೋತ್ಸಾಹಧನ ಘೋಷಿಸಿರುವುದು ವಿಶೇಷ.
ಅಗತ್ಯ ಕಲಿಕಾ ಸಾಮಗ್ರಿ
ಕಲಿಕಾಥಿರ್ಗಳಿಗೆ ನೋಟ್​ ಬುಕ್​, ಪೆನ್​, ಪೆನ್ಸಿಲ್​, ರಬ್ಬರ್​, ಶಾರ್ಪನರ್​ವುಳ್ಳ ಕಿಟ್​ ನೀಡಲಾಗುತ್ತದೆ. ಬೋಧಕರಿಗೆ ರೋಲಿಂಗ್​ ಬ್ಲಾ$್ಯಕ್​ ಬೋರ್ಡ್​, ಡಸ್ಟರ್​, ಚಾಕ್​ಪೀಸ್​ ನೀಡಲಾಗುತ್ತದೆ. ಬೋಧಕರು ನಿತ್ಯ ಹಾಜರಿ ಪಡೆದು ಮೇಲಾಧಿಕಾರಿಗಳಿಗೆ ಕಳುಹಿಸುತ್ತಾರೆ.
"

- ಮೇಲಾಧಿಕಾರಿಗಳ ಮಾರ್ಗದರ್ಶನ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರ ಸಹಕಾರದೊಂದಿಗೆ 3 ಕಾರ್ಯಕ್ರಮಗಳು ಚೆನ್ನಾಗಿ ಅನುಷ್ಠಾನಗೊಂಡಿವೆ. ಕಾರ್ಯಕ್ರಮ ಸಹಾಯಕ ಕೆ.ಬಿ. ಕುರಹಟ್ಟಿ ಅವರ ವಿಶೇಷ ಮುತುವಜಿರ್ಯಿಂದ ಕಾರ್ಯಕ್ರಮಗಳು ಪ್ರಗತಿ ಕಾಣುತ್ತಿವೆ.

— ಜಯಶ್ರೀ ವರೂರ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net