Library ಗ್ರಂಥಾಲಯ ದಾಸರಾಗಿ ಜ್ಞಾನ ಸಂಪಾದಿಸಿ

Library ಹುಬ್ಬಳ್ಳಿಯ ಉಣಕಲ್ಲ ಐ.ಜಿ. ಹಿರೇಗೌಡರ ಕಾಲೇಜಿನಲ್ಲಿ ಗ್ರಂಥಾಲಯಗಳಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಪ್ರಭಾವ ಕುರಿತ ಕಾರ್ಯಕ್ರಮದಲ್ಲಿ ನಿವೃತ್ತ ಗ್ರಂಥಪಾಲಕ ಡಾ. ಬಿ.ಎಸ್​. ಮಾಳವಾಡ ಮಾತನಾಡಿದರು. ಎಸ್​.ಎ್​. ಹೆಬಸೂರ, ಕೆ.ವೈ. ಮರದಣ್ಣವರ, ಶಿವಣ್ಣ ಹಂಗರಕಿ, ಸಚಿನ್​ ದ್ಯಾವಪ್ಪನವರ, ಇತರರು ಇದ್ದರು.
Library ಹುಬ್ಬಳ್ಳಿಯ ಉಣಕಲ್ಲ ಐ.ಜಿ. ಹಿರೇಗೌಡರ ಕಾಲೇಜಿನಲ್ಲಿ ಗ್ರಂಥಾಲಯಗಳಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಪ್ರಭಾವ ಕುರಿತ ಕಾರ್ಯಕ್ರಮದಲ್ಲಿ ನಿವೃತ್ತ ಗ್ರಂಥಪಾಲಕ ಡಾ. ಬಿ.ಎಸ್​. ಮಾಳವಾಡ ಮಾತನಾಡಿದರು. ಎಸ್​.ಎ್​. ಹೆಬಸೂರ, ಕೆ.ವೈ. ಮರದಣ್ಣವರ, ಶಿವಣ್ಣ ಹಂಗರಕಿ, ಸಚಿನ್​ ದ್ಯಾವಪ್ಪನವರ, ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಗ್ರಂಥಪಾಲಕ ಡಾ. ಮಾಳವಾಡ ಸಲಹೆ
ಹುಬ್ಬಳ್ಳಿ: Library ವಿದ್ಯಾರ್ಥಿಗಳು ಗ್ರಂಥಾಲಯಗಳ ದಾಸರಾಗುವ ಮೂಲಕ ಕೌಶಲ, ಜ್ಞಾನ ಸಂಪಾದನೆ ಮಾಡಿ ಯಶಸ್ಸು ಗಳಿಸಬೇಕೆಂದು ನಿವೃತ್ತ ಗ್ರಂಥಪಾಲಕ ಡಾ. ಬಿ.ಎಸ್​. ಮಾಳವಾಡ ಹೇಳಿದರು.
ಇಲ್ಲಿಯ ಉಣಕಲ್ಲ ಶ್ರೀ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ಐ.ಜಿ. ಹಿರೇಗೌಡರ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಗ್ರಂಥಾಲಯಗಳಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಪ್ರಭಾವ ಕುರಿತ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಗುರುವಿನ ಮಾರ್ಗದರ್ಶನದಲ್ಲಿ ನಡೆದು ಸಮಾಜದಲ್ಲಿ ಶ್ರೇಷ್ಠ ಸ್ಥಾನವನ್ನು ವಿದ್ಯಾರ್ಥಿಗಳು ರೂಪಿಸಿಕೊಳ್ಳಬೇಕು. ಗಡಿಯಾರದಂತೆ ನಿರಂತರ ಕಾರ್ಯಕ್ಷಮತೆ ಹೊಂದಿರಬೇಕು. ಸತತ ಪ್ರಯತ್ನದಿಂದ ಮಾತ್ರ ಯಶಸ್ಸು ಸಾಧ್ಯ ಎಂದರು.
ಅತಿಥಿಯಾಗಿದ್ದ ರಾಜರಾಜೇಶ್ವರಿ ವಿವಿಧೋದ್ದೇಶ ಸಹಕಾರ ಸಂದ ಅಧ್ಯಕ್ಷ ಕೆ.ವೈ. ಮರದಣ್ಣವರ, ಶಿವಣ್ಣ ಹಂಗರಕಿ, ಸಚಿನ್​ ದ್ಯಾವಪ್ಪನವರ, ಆರ್​.ವಿ. ಪಾಟೀಲ, ಆರ್​.ಎಸ್​. ಹನ್ನಿ, ಎಸ್​.ಎಂ. ಶಿರೂರ, ವಿಜಯಕುಮಾರ ಪಾಟೀಲ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸ್ಥಳಿಯ ಸಲಹಾ ಸಮಿತಿ ಅಧ್ಯಕ್ಷ ಶಿವಾನಂದ ಹೆಬಸೂರ ಮಾತನಾಡಿ, ಜ್ಞಾನ ಮತ್ತು ಸಂಸ್ಕಾರ ಎರಡು ಜೀವನ ಸಾಧನೆಗೆ ದಾರಿಯಾಗಿವೆ. ವಿದ್ಯಾರ್ಥಿಗಳು ಇವುಗಳ ಬಗ್ಗೆ ಸರಿಯಾದ ಗಮನ ಹರಿಸಬೇಕು ಎಂದರು.
ಪ್ರಾಂಶುಪಾಲ ಮೇಘಾ ಎಂ.ಜೆ., ಕಾರ್ಯದರ್ಶಿ ಶಿವಕುಮಾರಗೌಡ, ಸಮಿತಿ ಪದಾಧಿಕಾರಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪನ್ಯಾಸಕ ಬಸವರಾಜ ಕುರ್ತಕೋಟಿ ಪ್ರಾಸ್ತಾವಿಕ ಮಾತನಾಡಿದರು. ಪೃಥ್ವಿ ದವಾಸ್ಕರ ನಿರೂಪಿಸಿದರು. ಉಪನ್ಯಾಸಕ ವಿರೇಶ ಪಾಟೀಲ ಸ್ವಾಗತಿಸಿದರು. ಸಂಜನಾ ಬದಾಮಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net