ಹಿಂದೂ ಧರ್ಮದ ಉಳಿವಿಗಾಗಿ ಹೋರಾಡೋಣ Hindu

ಉಪ್ಪಿನಬೆಟಗೇರಿ ಗ್ರಾಮದ ಎಸ್.ಜಿ.ವಿ ಪ್ರೌಢ ಶಾಲೆಯ ಮೈದಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿರಾಟ್ ಹಿಂದೂ (Hindu) ಸಮ್ಮೇಳನವನ್ನು ಶ್ರೀಕಾಂತ ಕುಲಕರ್ಣಿ ಉದ್ಘಾಟಿಸಿದರು.
ಉಪ್ಪಿನಬೆಟಗೇರಿ ಗ್ರಾಮದ ಎಸ್.ಜಿ.ವಿ ಪ್ರೌಢ ಶಾಲೆಯ ಮೈದಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿರಾಟ್ ಹಿಂದೂ (Hindu) ಸಮ್ಮೇಳನವನ್ನು ಶ್ರೀಕಾಂತ ಕುಲಕರ್ಣಿ ಉದ್ಘಾಟಿಸಿದರು.
Published on
ಉಪ್ಪಿನಬೆಟಗೇರಿ: ಸಮಾಜದಲ್ಲಿ ನಾವೆಲ್ಲ ಹಿಂದೂ (Hindu) ನಾವೆಲ್ಲ ಒಂದು ಎಂಬ ಭಾವನೆ ಮೂಡಿಸಿ. ಸಾಮರಸ್ಯದ ವಾತಾವರಣ ನಿರ್ಮಿಸಲು ಎಲ್ಲರು ಶ್ರಮಿಸಬೇಕು ಎಂದು ಕರ್ನಾಟಕ ಉತ್ತರ ಪ್ರಾಂತ ಸಂಸ್ಕೃತ ಭಾರತಿ ಪ್ರಾಂತ ಮಂತ್ರಿ ಶ್ರೀಕಾಂತ ಕುಲಕರ್ಣಿ ಹೇಳಿದರು.
ಸ್ಥಳೀಯ ಶ್ರೀಗುರು ವಿರೂಪಾಕ್ಷೇಶ್ವರ ಪ್ರೌಢಶಾಲೆ ಮೈದಾನದಲ್ಲಿ ಆಯೋಜಿಸಿದ್ದ ಉಪ್ಪಿನಬೆಟಗೇರಿ ಹೋಬಳಿಯ ಹಿಂದೂ ಸಮ್ಮೇಳನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮ, ಸಂಸ್ಕೃತಿ, ಸಮಾಜ ಇವುಗಳ ಹಿಂದೆ ಪವಿತ್ರ ಹಿಂದೂ ಶಬ್ದವಿದೆ. ’ಓಂ’ ಕಾರದಿಂದ ಬ್ರಹ್ಮಾಂಡ ಸೃಷ್ಠಿಯಾಗಿದೆ. ವ್ಯಾಪಾರದ ನೆಪ ಮಾಡಿ ಯುರೋಪಿಯನ್ನರು, ಇಸ್ಲಾಮಿಕರು ದೇಶಕ್ಕೆ ಬಂದರು.
ಇಲ್ಲಿಯ ದೇವಾಲಯಗಳನ್ನು ಧ್ವಂಸ ಮಾಡಿ, ಸಂಪತ್ತನ್ನು ಲೂಟಿ ಮಾಡಿದರು. ಹಿಂದೂಗಳ ಸಂಸ್ಕೃತಿ, ಆಚಾರ, ವಿಚಾರಗಳನ್ನು ಮರೆಮಾಚಲು ಸಾಕಷ್ಟು ಪ್ರಯತ್ನಿಸಿದರು.
ಆದರೆ, ಆಗಿನ ಕಾಲದ ನಮ್ಮ ಹಿಂದೂ ಬಾಂಧವರು ಇದಾವುದಕ್ಕೂ ಆಸ್ಪದ ಕೊಡದೆ ಧರ್ಮವನ್ನು ಉಳಿಸಿದ್ದು, ಮುಂದಿನ ದಿನಗಳಲ್ಲಿ ನಾವೆಲ್ಲರು ನಮ್ಮ ಹಿಂದೂ ಧರ್ಮದ ಉಳಿವಿಗೋಸ್ಕರ ಹೋರಾಟ ಮಾಡಬೇಕಿದೆ ಎಂದರು.
ಸ್ಥಳೀಯ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ದಿವ್ಯ ಸಾನ್ನಿಧ್ಯವಹಿಸಿದ್ದರು. ಹಿಂದೂ ಸಮ್ಮೇಳನ ಆಯೋಜನಾ ಸಮಿತಿ ಅಧ್ಯಕ್ಷ ಕಲ್ಲಯ್ಯ ವಿಭೂತಿಮಠ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮಕ್ಕೂ ಮೊದಲು ಗ್ರಾಮದ ರೇಣುಕಾ ಯಲ್ಲಮ್ಮ ದೇವಸ್ಥಾನದಿಂದ ಶೋಭಾಯಾತ್ರೆ ನಡೆಯಿತು.
ಶೋಭಾಯಾತ್ರೆಯು ಹೊಸಪೇಟಿಮಠ ಓಣಿ, ಮಾರುಕಟ್ಟೆ ರಸ್ತೆ, ಹನುಮನಕೊಪ್ಪ, ಜೈನ್ ಗಲ್ಲಿ, ಗಣಪತಿ ಗುಡಿ, ವಿರಕ್ತಮಠ ಓಣಿಗಳಲ್ಲಿ ಸಂಚರಿಸಿತು.
ಪುಡಕಲಕಟ್ಟಿಯ ಆಧ್ಯಾತ್ಮಿಕ ಚಿಂತಕ ಈರಣ್ಣ ಸತ್ಯಣ್ಣವರ, ಮೃತ್ಯುಂಜಯ ಯರಗಂಬಳಿಮಠ, ಮಂಜುನಾಥ ಮಕ್ಕಳಗೇರಿ, ರಮೇಶ ಲಂಬಿ, ನರಸಪ್ಪ ಬಟ್ಟಂಗಿ, ರಮೇಶ ಮಲ್ಲೇದಿ, ರಮೇಶ ಮಡಿವಾಳರ, ಮಲ್ಲಿಕಾರ್ಜುನ ವಿಜಾಪೂರ, ಎಸ್.ಬಿ.ಅಂಗಡಿ, ಶಂಕರ ಕಿತ್ತೂರ, ಸೇರಿದಂತೆ ಉಪ್ಪಿನಬೆಟಗೇರಿ, ಯಾದವಾಡ, ಪುಡಕಲಕಟ್ಟಿ, ಹಾರೋಬೆಳವಡಿ ಗ್ರಾಪಂ.ವ್ಯಾಪ್ತಿಯ ಸುಮಾರು ಮೂರು ಸಾವಿರಕ್ಕೂ ಅಧಿಕ ಹಿಂದೂ ಬಾಂಧವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net