

ಪ್ರಮುಖ ಮುಖ್ಯಾಂಶಗಳು
ಉದ್ದಿನ ಕಾಳು ಖರೀದಿ ಕೇಂದ್ರದಲ್ಲಿ ನೋಂದಣಿಯಾದ ಎಲ್ಲ ರೈತರ ಉದ್ದಿನ ಕಾಳುಗಳ ಖರೀದಿ ಮಾಡಬೇಕು. ನಾಲ್ಕಾರು ದಿನಗಳಿಂದ ಉದ್ದಿನ ಕಾಳಿನ ಚೀಲ ತುಂಬಿಕೊಂಡು ಬಿಸಿಲು, ಚಳಿಯನ್ನು ಲೆಕ್ಕಿಸದೆ ಕೇಂದ್ರದ ಮುಂದೆ ವಾಸ್ತವ್ಯ ಮಾಡಿದ್ದೇವೆ. ಈಗ ಕಾಳು ಖರೀದಿ ಬಂದಾಗಿದೆ ಎಂದು ಹೇಳುತ್ತಿದ್ದಾರೆ. ಕೂಡಲೆ ಉದ್ದಿನಕಾಳು ಖರೀದಿ ಆರಂಭಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡಲಾಗುವುದು.
ಧಾರವಾಡ ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಶೇ. 60ರಷ್ಟು ರೈತರ ಉದ್ದಿನಕಾಳು ಖರೀದಿ ಮಾಡಲಾಗಿದೆ. ಡಿ. 23ಕ್ಕೆ ಉದ್ದಿನಕಾಳು ಖರೀದಿಗೆ ಕೊನೇ ದಿನ ಎಂದು ಮೊದಲೆ ಹೇಳಲಾಗಿತ್ತು. ಅದರಂತೆ ಖರೀದಿ ಕೇಂದ್ರದ ವೆಬ್‌ಸೈಟ್ ಬಂದಾಗಿದೆ. ಇನ್ನೂ ಸಾಕಷ್ಟು ರೈತರು ಉದ್ದಿನಕಾಳು ಮಾರಾಟ ಮಾಡುವವರಿದ್ದು, ಖರೀದಿಯನ್ನು ಮುಂದುವರಿಸುವಂತೆ ನಾವು ಮನವಿ ಸಲ್ಲಿಸಿದ್ದು, ಒಂದೆರಡು ದಿನದಲ್ಲಿ ಮತ್ತೆ ಖರೀದಿ ಆರಂಭಿಸುವ ಸಾಧ್ಯತೆ ಇದೆ.