ಕುಂದಗೋಳದ ಪ್ರಮುಖ ರಸ್ತೆಗಳಲ್ಲಿರುವ ಮದ್ಯದಂಗಡಿಗಳನ್ನು liquor store ಸ್ಥಳಾಂತರಿಸಬೇಕು ಎಂದು ಕರ್ನಾಟಕ ಯುವ ರಕ್ಷಣಾ ವೇದಿಕೆ ವತಿಯಿಂದ ತಹಸೀಲ್ದಾರ್ ರಾಜು ಮಾವರಕರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಯುವ ರಕ್ಷಣಾ ವೇದಿಕೆಯಿಂದ ತಹಸೀಲ್ದಾರ್ ರಾಜು ಮಾವರಕರಗೆ ಮನವಿ
ಕುಂದಗೋಳ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿರುವ ಮದ್ಯದ ಅಂಗಡಿಗಳಿಂದ liquor store ಸಾರ್ವಜನಿಕರು, ಮಹಿಳೆಯರು ಹಾಗೂ ಶಾಲಾ ಮಕ್ಕಳಿಗೆ ನಿರಂತರ ಕಿರುಕುಳ ಉಂಟಾಗುತ್ತಿದ್ದು, ಕೂಡಲೇ ಅವುಗಳನ್ನು ಪಟ್ಟಣದ ಹೊರವಲಯಕ್ಕೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಯುವ ರಕ್ಷಣಾ ವೇದಿಕೆಯ ತಾಲೂಕು ಘಟಕದ ಪದಾಧಿಕಾರಿಗಳು ಸೋಮವಾರ ತಹಸೀಲ್ದಾರ್ ರಾಜು ಮಾವರಕರ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಮಾರುಕಟ್ಟೆ ಮುಖ್ಯರಸ್ತೆ ಹೊಂದಿಕೊಂಡಿರುವ ಮದ್ಯದ ಅಂಗಡಿಗಳಿಂದ ಮಹಿಳೆಯರಿಗೆ ಮಕ್ಕಳಿಗೆ ಕಿರುಕುಳ ಉಂಟಾಗುತ್ತಿವೆ. ಇದರಿಂದಾಗಿ ಈ ಭಾಗದಲ್ಲಿ ವಾಸಿಸುವ ಕುಟುಂಬಗಳಿಗೆ ದಿನನಿತ್ಯ ನೆಮ್ಮದಿ ಹಾಗೂ ಶಾಂತಿ ಭಂಗವಾಗುತ್ತಿದೆ.
ಮದ್ಯವ್ಯಸನಿಗಳ ಗಲಾಟೆ, ಅಸಭ್ಯ ವರ್ತನೆ ಮತ್ತು ರಸ್ತೆ ಬದಿಯ ಕಿರುಕುಳದಿಂದ ಮಹಿಳೆಯರು ಹಾಗೂ ಹಿರಿಯ ನಾಗರಿಕರು ಭಯದಲ್ಲೇ ಓಡಾಡುವಂತಾಗಿದೆ. ಶಾಲಾ ಮಕ್ಕಳ ಮೇಲೆಯೂ ಇದು ಕೆಟ್ಟ ಪ್ರಭಾವ ಬೀರುತ್ತಿದೆ ಎಂದು ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಉಮೇಶ ಯರಗುಪ್ಪಿ, ಜನವಸತಿ ಪ್ರದೇಶಗಳಲ್ಲಿ ಮದ್ಯದ ಅಂಗಡಿಗಳಿರುವುದು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತಿದೆ. ಈಗಾಗಲೇ ಅಹಿತಕರ ಘಟನೆಗಳು ಸಂಭವಿಸಿವೆ.
ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಹಾಗೂ ತಾಲೂಕಾಡಳಿತ ಎಚ್ಚೆತ್ತುಕೊಳ್ಳಬೇಕು. ಒಂದು ವೇಳೆ ಈ ಅಂಗಡಿಗಳನ್ನು ಪಟ್ಟಣದ ಗಡಿಯಿಂದ ಸ್ಥಳಾಂತರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂದೀಪ ಪಾಟೀಲ, ಶಂಕರ ಲಕ್ಕುಂಡಿ, ವೀರೇಶ ಲಕ್ಕುಂಡಿ, ಲಕ್ಷಣ ರಾಯಬಾಗಿ, ನವೀನ ಯರಗುಪ್ಪಿ, ಸಿರಾಜ್ ಜಕ್ಕಲಿ, ಕಾರ್ತಿಕ ಪುಟ್ಟಿ, ಅಭಿಷೇಕ ಸೊರಟೂರ, ಶರತ್ ಕೈರಯಿ ಇತರರಿದ್ದರು.