ಗಣೇಶೋತ್ಸವ ಕೇವಲ ಒಂದು ಪ್ರಾಂತ ಹಾಗೂ ಸಮುದಾಯಕ್ಕೆ ಸೀಮಿತವಲ್ಲ.
ಸ್ನೇಹ, ಆತ್ಮೀಯತೆಯನ್ನು ಹಿಂದೂ ಸಮಾಜ ನೀಡುತ್ತದೆ.
ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳ ವತಿಯಿಂದ ರಾಣಿ ಚನ್ನಮ್ಮ ಮೈದಾನದಲ್ಲಿ ಮೂರು ದಿನಗಳವರೆಗೆ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಗಣೇಶೋತ್ಸವ ಕೇವಲ ಒಂದು ಪ್ರಾಂತ ಹಾಗೂ ಸಮುದಾಯಕ್ಕೆ ಸೀಮಿತವಲ್ಲ. ಇಡೀ ವಿಶ್ವವನ್ನೇ ಆವರಿಸಿದೆ. ಯುವಕರನ್ನು ಒಂದಾಗಿಸುವ ಮಹಾ ಅಭಿಯಾನ ಈ ಗಣೇಶೋತ್ಸವ. ಗಣೇಶ ಹಾಗೂ ಹನುಮಂತ ದೇವರನ್ನು ಎಲ್ಲ ಜಾತಿಯವರು ಆರಾಧನೆ ಮಾಡುತ್ತಾರೆ ಎಂದರು.
ಗಣೇಶ ಮೂರ್ತಿ ಸ್ಥಾಪನೆಯಿಂದ ರಾಣಿ ಚನ್ನಮ್ಮ ಮೈದಾನದಲ್ಲಿ ಗಲಾಟೆಯಾಗುತ್ತದೆ ಎಂದು ಕೆಲವರು ಭಾವಿಸಿದ್ದರು. ಆದರೆ, ಹಿಂದೂಗಳು ಗಲಾಟೆ ಮಾಡುವ ಸ್ವಭಾವದವರಲ್ಲ. ಯಾರೇ ಬಂದು ಆಲಂಗಿಸಿದರೂ ಪ್ರೀತಿಯಿಂದ ಅಪ್ಪಿಕೊಳ್ಳುತ್ತೇವೆ.
ಸ್ನೇಹ, ಆತ್ಮೀಯತೆಯನ್ನು ಹಿಂದೂ ಸಮಾಜ ನೀಡುತ್ತದೆ. ಆದರೆ, ಯಾರಾದರೂ ಹಿಂದೂಗಳ ಆಚರಣೆಗಳಿಗೆ, ಭಾವನೆಗಳಿಗೆ ಅಡ್ಡಿಪಡಿಸಿದರೆ ತಕ್ಕ ಪಾಠ ಕಲಿಸುವ ಶಕ್ತಿಯನ್ನೂ ಹೊಂದಿದ್ದೇವೆ ಎಂದರು.
ಹಿಂದೂ ರಾಜಕಾರಣಿಗಳು ಹಾಗೂ ಮುಖಂಡರು ಮುಸ್ಲಿಂರ ಇಫ್ತಿಯಾರ ಕೂಟಕ್ಕೆ ಹೋಗುತ್ತಾರೆ. ಮುಸ್ಲಿಂ ಪ್ರಮುಖರನ್ನು ಸಹ ಗಣೇಶೋತ್ಸವಕ್ಕೆ ಆಹ್ವಾನಿಸಬೇಕು.
ಮುಸ್ಲಿಂರ ನಮಾಜ್ಗೆ ಹಿಂದೂಗಳ ವಿರೋಧ ಇಲ್ಲ. ಆದರೆ, ಹಿಂದೂಗಳ ಹಬ್ಬಗಳ ಆಚರಣೆಗೆ ಅಡ್ಡಿಪಡಿಸಿದರೆ ಸುಮ್ಮನೆ ಕೈ ಕಟ್ಟಿ ಕುಳಿತುಕೊಳ್ಳುವ ಜಾಯಮಾನ ನಮ್ಮದಲ್ಲ. ಹಿಂದೂಗಳು ಬದಲಾಗಿದ್ದಾರೆ. ಯಾವುದೇ ದುಷ್ಕೃತ್ಯಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದಕ್ಕೆ ಸಜ್ಜಾಗಿದ್ದಾರೆ ಎಂದರು.
ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳದ ಅಧ್ಯಕ್ಷ ಸಂಜೀವ ಬಡಸ್ಕರ ಪ್ರಸ್ತಾವಿಕವಾಗಿ ಮಾತನಾಡಿದರು. ಪೌರ ಕಾರ್ವಿುಕರನ್ನು ಸನ್ಮಾನ ಮಾಡಲಾಯಿತು.
ರಾಜ್ಯಸಭಾ ಸದಸ್ಯ ಪ್ರೊ. ಎಂ. ನಾಗರಾಜ, ಶಾಸಕರಾದ ಮಹೇಶ ಟೆಂಗಿನಕಾಯಿ, ಸಿ.ಸಿ. ಪಾಟೀಲ, ಮೇಯರ್ ದುರ್ಗಮ್ಮ ಬೆಜವಾಡ, ಗೌತಮ ಬಾಫಣಾ, ಡಾ. ವಿ.ಎಸ್.ವಿ. ಪ್ರಸಾದ, ಮಹಾದೇವ ಕರಮರಿ, ಇತರರಿದ್ದರು. ವಿನಾಯಕ ತಲಗೇರಿ ವಂದೇ ಮಾತರಂ ಗೀತೆ ಪ್ರಸ್ತುತಪಡಿಸಿದರು.
ವಿಜೃಂಭಣೆಯಿಂದ ವಿಸರ್ಜನೆ : ರಾಣಿ ಚನ್ನಮ್ಮ ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ ಭಗವಾಧ್ವಜ ಹಿಡಿದ ಗಣೇಶ ಮೂರ್ತಿಯ ವಿಸರ್ಜನೆ ಬುಧವಾರ ವಿಜೃಂಭಣೆಯಿಂದ ನೆರವೇರಿತು.
ಬೆಳಗ್ಗೆಯಿಂದ ಮೈದಾನದಲ್ಲಿ ವಿಶೇಷ ಹೋಮ, ಹವನ ನಡೆಯಿತು. 11.55ಕ್ಕೆ ಮೈದಾನದಿಂದ ಗಣೇಶ ಮೂರ್ತಿಯನ್ನು ಹೊರತರಲಾಯಿತು.
ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮಧ್ಯಾಹ್ನ ಸುಮಾರು 2.30ಕ್ಕೆ ವಿಸರ್ಜನಾ ಮೆರವಣಿಗೆ ಆರಂಭಿಸಲಾಯಿತು. ಝಾಂಜ್, ಡೊಳ್ಳು, ನಗಾರಿ, ಕಹಳೆ ಇನ್ನಿತರ ದೇಸಿ ವಾದ್ಯಗಳು ಮೆರವಣಿಗೆಗೆ ಮತ್ತಷ್ಟು ರಂಗ ನೀಡಿದವು.
ಸುತ್ತಲಿನ ನಗರ ಹಾಗೂ ಪಟ್ಟಣಗಳಿಂದ ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ಸುಮಾರು 7 ಗಂಟೆಗೆ ಹೊಸೂರಿನ ಬಾವಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.