ವಿದ್ಯಾರ್ಥಿಗಳು ಕನಸು ನಸಾಗಿಸಲು ಶ್ರಮಿಸಲಿ true

true ಹುಬ್ಬಳ್ಳಿಯ ಚೇತನ ಕಾಲೇಜಿನಲ್ಲಿ ಆಯೋಜಿಸಿದ್ದ ಯುಫೋರಿಯಾ ಸೆಲೆಬ್ರೇಷನ್ ಆಫ್ ನ್ಯೂ ಬಿಗಿನಿಂಗ್ಸ್ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೊ. ಎಸ್.ಬಿ. ನಾಡಗೌಡ ನೆರವೇರಿಸಿದರು.
true ಹುಬ್ಬಳ್ಳಿಯ ಚೇತನ ಕಾಲೇಜಿನಲ್ಲಿ ಆಯೋಜಿಸಿದ್ದ ಯುಫೋರಿಯಾ ಸೆಲೆಬ್ರೇಷನ್ ಆಫ್ ನ್ಯೂ ಬಿಗಿನಿಂಗ್ಸ್ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೊ. ಎಸ್.ಬಿ. ನಾಡಗೌಡ ನೆರವೇರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು
  • ಚೇತನ ಕಾಲೇಜ್ ನಲ್ಲಿ ಆಯೋಜಿಸಿದ್ದ ಯುಫೋರಿಯಾ -2026 ಸೆಲೆಬ್ರೇಷನ್ ಆಫ್ ನ್ಯೂ ಬಿಗಿನಿಂಗ್ಸ್ ಕಾರ್ಯಕ್ರಮ
  • ಜೀವನದ ಸವಾಲುಗಳನ್ನು ಎದುರಿಸುವಂತಹ ಕೌಶಲಗಳನ್ನು ಬೆಳೆಸಿಕೊಳ್ಳಬೇಕು.
ಚೇತನ ಕಾಲೇಜ್ ಆಫ್ ಕಾಮರ್ಸ್, ಬಿಬಿಎ ಮತ್ತು ಬಿಸಿಎನಲ್ಲಿ ಆಯೋಜಿಸಿದ್ದ ಯುಫೋರಿಯಾ -2026 ಸೆಲೆಬ್ರೇಷನ್ ಆಫ್ ನ್ಯೂ ಬಿಗಿನಿಂಗ್ಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ನಿರಂತರವಾಗಿ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಮೌಲ್ಯ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದರ ಜತೆಗೆ ತಂದೆ-ತಾಯಿಯನ್ನು ಗೌರವಿಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಚೇತನ್ ಬಿಜಿನೆಸ್ ಸ್ಕೂಲ್ ನಿರ್ದೇಶಕ ಡಾ. ವಿ.ಎಂ. ಕೊರವಿ ಮಾತನಾಡಿ, ವಿದ್ಯಾರ್ಥಿಗಳು ಪದವಿ ಪಡೆಯುವುದಕ್ಕೆ ಸೀಮಿತವಾಗದೆ ಜೀವನದ ಸವಾಲುಗಳನ್ನು ಎದುರಿಸುವಂತಹ ಕೌಶಲಗಳನ್ನು ಬೆಳೆಸಿಕೊಳ್ಳಬೇಕು.
ಶೈಕ್ಷಣಿಕ ಜ್ಞಾನವನ್ನು ಪ್ರಾಯೋಗಿಕ ಕೌಶಲದೊಂದಿಗೆ ಸಂಯೋಜಿಸುವ ಮೂಲಕ ಉತ್ತಮ ಭವಿಷ್ಯ ನಿರ್ವಿುಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶೈಕ್ಷಣಿಕ ಸಲಹೆಗಾರ ಡಾ. ಕೆ.ಸಿ. ಪಾಂಗಿ, ಪ್ರಾಂಶುಪಾಲ ಡಾ. ಪವನ ಅಪರಂಜಿ, ಡಾ. ಶಿಲ್ಪಾ ಕುಲಕರ್ಣಿ, ಡಾ. ಭಾರತಿ ಬಡಿಗೇರ, ಪ್ರೊ. ವೀಣಾ ಕುಂಶಿ, ಪ್ರೊ. ಸ್ವಾತಿ ಕಣ್ಮಡಿ, ಪ್ರೊ. ಸ್ವಾತಿ ಕ್ಯಾತನ್ನವರ, ಪೊ. ಭಾಗ್ಯಶ್ರೀ ಬಳಿಗಾರ ಹಾಗೂ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net