auto ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದ ಆವರಣದಲ್ಲಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ವತಿಯಿಂದ ನಿರ್ವಿುಸಿದ ನೂತನ ಆಟೋ ಶೆಲ್ಟರ್ ಉದ್ಘಾಟನಾ ಸಮಾರಂಭದಲ್ಲಿ ನಾಮಿನಿ ವಸುಕಿ ಸಂಜೆ, ಕಿರಣ ಹೆಬಸೂರ, ವಿವೇಕಾನಂದ ವಿಶ್ವಜ್ಞ ಹಾಗೂ ಇತರರಿದ್ದರು.
ಗೋಕುಲ ರಸ್ತೆಯ ವಾಯವ್ಯ ಸಾರಿಗೆ ಸಂಸ್ಥೆಯ ಹೊಸ ಬಸ್ ನಿಲ್ದಾಣದಲ್ಲಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ವತಿಯಿಂದ 3.50 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಿದ ನೂತನ ಆಟೋ ಶೆಲ್ಟರ್ ಉದ್ಘಾಟಿಸಿ, ಅವರು ಮಾತನಾಡಿದರು.
ಹುಬ್ಬಳ್ಳಿಯಲ್ಲಿ 15 ಸಾವಿರಕ್ಕೂ ಹೆಚ್ಚು ಆಟೋ ರಿಕ್ಷಾಗಳು ಕಾರ್ಯನಿರ್ವಹಿಸುತ್ತಿವೆ. ಈ ದೊಡ್ಡ ಸಂಖ್ಯೆಯ ಆಟೋ ಚಾಲಕರು ನಗರದ ಉತ್ತಮ ಬದಲಾವಣೆಗೆ ಕಾರಣರಾಗಬಹುದು ಎಂದು ತಿಳಿಸಿದರು.
ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಅಧ್ಯಕ್ಷ ಕಿರಣ ಹೆಬಸೂರ ಮಾತನಾಡಿ, ಸಮಾಜಮುಖಿ ಯೋಜನೆಗಳನ್ನು ಕೈಗೊಳ್ಳುವುದು ರೋಟರಿಯ ಪ್ರಮುಖ ಧ್ಯೇಯವಾಗಿದೆ. ಈ ಯೋಜನೆ ಕ್ಲಬ್ ಸದಸ್ಯರ ಸಹಕಾರ ಮತ್ತು ಉದಾರತೆಯಿಂದ ಸಾಧ್ಯವಾಗಿದೆ ಎಂದು ತಿಳಿಸಿದರು.
ವಾಯವ್ಯ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ವಿವೇಕಾನಂದ ವಿಶ್ವಜ್ಞ ಮಾತನಾಡಿ, ಆಟೋ ಚಾಲಕರಿಗಾಗಿ ರೋಟರಿ ಕ್ಲಬ್ ಶೆಲ್ಟರ್ ನಿರ್ವಿುಸಿದೆ. ಇದನ್ನು ಎಲ್ಲರೂ ಜವಾಬ್ದಾರಿಯಿಂದ ಬಳಸಿಕೊಳ್ಳಿ. ಸ್ವಚ್ಛತೆ ಮತ್ತು ಶಿಸ್ತನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಕಾಂತ ಬಡಿಗೇರ ಮಾತನಾಡಿ, ಆಟೋ ಚಾಲಕರು ಪ್ರತಿಯೊಬ್ಬ ಪ್ರಯಾಣಿಕನನ್ನೂ ಅತಿಥಿಯಂತೆ ಗೌರವದಿಂದ ನಡೆಸಿಕೊಳ್ಳಬೇಕು. ಚಾಲಕರ ಉತ್ತಮ ಸೇವೆಯಿಂದ ಹುಬ್ಬಳ್ಳಿಯ ಹೆಸರು ಇನ್ನಷ್ಟು ಬೆಳೆಯಲಿ ಎಂದು ಹೇಳಿದರು.
ರೋಟರಿ ಕ್ಲಬ್ ಸದಸ್ಯರ ದೇಣಿಗೆಯಿಂದ ನಿರ್ವಣಗೊಂಡಿರುವ 120 ಅಡಿ ಉದ್ದದ ಆಟೋ ಶೆಲ್ಟರ್ನಲ್ಲಿ ಏಕಕಾಲದಲ್ಲಿ 20 ಆಟೋ ರಿಕ್ಷಾಗಳು ನಿಲ್ಲುವ ವ್ಯವಸ್ಥೆ ಕಲ್ಪಿಸಲಾಗಿದೆ.
ರೋಟರಿ ಕ್ಲಬ್ ಕಾರ್ಯದರ್ಶಿ ರಿಷಿ ತಿವಾರಿ, ಸಮುದಾಯ ಸೇವಾ ನಿರ್ದೇಶಕ ಯೋಗೇಶ ಕರನಂದಿಕರ, 2026-27ನೇ ಸಾಲಿನ ಅಧ್ಯಕ್ಷ ಎಸ್. ವಿ. ಕಡಬಿ, ಕಾರ್ಯದರ್ಶಿ ಅಮರ ಸೂಜಿ, ಡಾ. ಎನ್.ಎ. ಚರಂತಿಮಠ ಉಪಸ್ಥಿತರಿದ್ದರು.