ಉಕ ಕಲಾವಿದರಿಗೆ ಸಿನೆಮಾದಲ್ಲಿ ಅವಕಾಶ ಸಿಗಲಿ cinema

cinema ‘ಏನಾಯಿತು’ ಕನ್ನಡ ಚಲನಚಿತ್ರಕ್ಕೆ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದಲ್ಲಿ ಸ್ವರ್ಣ ಸಮೂಹ ಸಂಸ್ಥೆಯ ಎಂಡಿ ಚಾಲನೆ ನೀಡಿದರು.
cinema ‘ಏನಾಯಿತು’ ಕನ್ನಡ ಚಲನಚಿತ್ರಕ್ಕೆ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದಲ್ಲಿ ಸ್ವರ್ಣ ಸಮೂಹ ಸಂಸ್ಥೆಯ ಎಂಡಿ ಚಾಲನೆ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಉತ್ತಮ ಸದಭಿರುಚಿಯ ಚಿತ್ರಗಳು ಹೆಚ್ಚು ಹೊರಬರಬೇಕಿದೆ.
  • ಇನ್ನಷ್ಟು ಅವಕಾಶ ಸಿಗಬೇಕಾಗಿದೆ.
  • ಸಾಹಿತ್ಯಿಕ ಚಿತ್ರಗಳು ಬರುತ್ತಿರುವುದು ಅಪರೂಪ
ಹುಬ್ಬಳ್ಳಿ :
ಶ್ರೀ ಸಿದ್ಧಾರೂಢ ಮಠದಲ್ಲಿ ಆಯೋಜಿಸಿದ್ದ ವಿಸ್ಮಯ ವೆಂಚರ್ಸ್ ನಿಮಾಣದ ‘ಏನಾಯಿತು’ ಕನ್ನಡ ಚಲನಚಿತ್ರಕ್ಕೆ ಕ್ಯಾಮೆರಾ ಚಾಲನೆ ನೀಡಿ ಮಾತನಾಡಿದರು.
ಉತ್ತಮ ಸದಭಿರುಚಿಯ ಚಿತ್ರಗಳು ಹೆಚ್ಚು ಹೊರಬರಬೇಕಿದೆ. ಏನಾಯಿತು ಈ ಸಿನಿಮಾ ಸಾಹಿತ್ಯಿಕವಾಗಿದೆ. ಇಂತಹ ಸಾಹಿತ್ಯಿಕ ಚಿತ್ರಗಳು ಬರುತ್ತಿರುವುದು ಅಪರೂಪ ಎಂದರು.
ಉತ್ತರ ಕರ್ನಾಟಕದಲ್ಲಿ ಹಲವು ಕಲಾವಿದರು, ತಂತ್ರಜ್ಞರು ಇದ್ದಾರೆ. ಅವರಿಗೆಲ್ಲ ಇನ್ನಷ್ಟು ಅವಕಾಶ ಸಿಗಬೇಕಾಗಿದೆ. ಆ ನಿಟ್ಟಿನಲ್ಲಿ ಈ ಭಾಗದಲ್ಲಿ ಸಿನಿಮಾ ಕೆಲಸಗಳು ಹೆಚ್ಚು ನಡೆಯಬೇಕಿದೆ ಎಂದು ಸಲಹೆ ನೀಡಿದರು.
ಯುವ ಜನಾಂಗವನ್ನು ಉತ್ತಮ ದಾರಿಗೆ ಕೊಂಡೊಯ್ಯುವ ಮಾರ್ಗದರ್ಶಿ ಸಿನಿಮಾಗಳು ಮೂಡಿ ಬರಬೇಕಿದೆ ಎಂದು ತಿಳಿಸಿದರು.
ಸಿನೆಮಾಕ್ಕೆ ಕ್ಲಾಪ್ ಮಾಡಿದ ಶ್ರೀ ಸಿದ್ಧಾರೂಢ ಮಠ ಟ್ರಸ್ಟ್ ಕಮೀಟಿ ಚೇರ್ಮನ್ ಬಾಳು ಮಗಜಿಕೊಂಡಿ ಮಾತನಾಡಿ, ಇಡೀ ಕುಟುಂಬದವರು ಕುಳಿತು ನೋಡುವ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಲನಚಿತ್ರಗಳು ಹೊರಬರಲಿ ಎಂದು ಹೇಳಿದರು.
ಎವಿಕೆ ಫೌಂಡೇಶನ್ ಸಂಸ್ಥಾಪಕ ವೆಂಕಟೇಶ ಕಾಟವೆ, ಹಿರಿಯ ಕವಿ ಮಹಾಂತಪ್ಪ ನಂದೂರ, ಡಾ. ರಾಮು ಮೂಲಗಿ, ನಾಯಕ ನಟ ಇಶಾನ್, ನಟಿ ಚೈತ್ರ ತೋಟದ ಹಾಗೂ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net