ವಿಮಾನ ನಿಲ್ದಾಣದಿಂದ ಕಾಲ್ಕಿತ್ತಿರುವ ಚಿರತೆ Leopard

Leopard ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕೂಂಬಿಂಗ್ ನಡೆಸಿದ ಅರಣ್ಯ ಇಲಾಖೆ ತಂಡ.
Leopard ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕೂಂಬಿಂಗ್ ನಡೆಸಿದ ಅರಣ್ಯ ಇಲಾಖೆ ತಂಡ.
Published on

ಪ್ರಮುಖ ಮುಖ್ಯಾಂಶಗಳು

  • ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಕಾಣದ ಲೆಪರ್ಡ್ ಕುರುಹು
  • Leopard ಚಿರತೆಯ ಪಾದದ ಹೊಸ ಕುರುಹುಗಳಾಗಲಿ ಕಂಡುಬರಲಿಲ್ಲ.
  • ಸುತ್ತಲಿನ ಬಡಾವಣೆ ಜನರಲ್ಲಿ ಆತಂಕ ಮೂಡಿತ್ತು.
ಹುಬ್ಬಳ್ಳಿ : ಹುಬ್ಬಳ್ಳಿ ವಿಮಾನ ನಿಲ್ದಾಣದ ಆವರಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ಸತತ ಆರು ತಾಸು ಕೂಂಬಿಂಗ್ (ಹುಡುಕಾಟ) ನಡೆಸಿದ್ದು, ಚಿರತೆಯ (Leopard ) ಯಾವುದೇ ಕುರುಹು ಪತ್ತೆಯಾಗಿಲ್ಲ.
ಅರಣ್ಯ ಇಲಾಖೆಯ 30 ಜನ ಸಿಬ್ಬಂದಿ ಪ್ರತ್ಯೇಕ 7-8 ತಂಡ ರಚಿಸಿಕೊಂಡು, 250 ಎಕರೆ ವ್ಯಾಪ್ತಿಯಲ್ಲಿ ಕೂಂಬಿಂಗ್ ನಡೆಸಿದರು.
ಕಳೆದ 15 ದಿನಗಳ ಹಿಂದೆ ವಿಮಾನ ನಿಲ್ದಾಣದ ಆವರಣದಲ್ಲಿ ನಿಲ್ದಾಣದ ಪರಿಶೀಲಾ ತಂಡದ ಕಣ್ಣಿಗೆ ಚಿರತೆ ಕಾಣಿಸಿತ್ತು.
ನಂತರ ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಗಾಮನಗಟ್ಟಿ ಹಾಗೂ ವಿಮಾನ ನಿಲ್ದಾಣದ ಆವರಣದಲ್ಲಿ ಪ್ರತ್ಯೇಕ ಮೂರು ಬೋನುಗಳನ್ನಿಟ್ಟು, ಅದರಲ್ಲಿ ನಾಯಿ ಹಾಗೂ ಹಂದಿಗಳನ್ನು ಇಟ್ಟಿದ್ದರು.
ಚಿರತೆಯ ಚಲನವಲನ ಗಮನಿಸುವುದಕ್ಕಾಗಿ 15 ಕ್ಯಾಮರಾ ಟ್ರಾ್ಯಪ್​ಗಳನ್ನೂ ಅಳವಡಿಸಿದ್ದರು.
ಚಿರತೆ ವಿಮಾನ ನಿಲ್ದಾಣದ ಗೋಡೆಯಿಂದ ಜಿಗಿದು ಹೊರಗೆ ಹೋಗುವ, ಮರಳಿ ನಿಲ್ದಾಣದ ಆವರಣದೊಳಗೆ ಜಿಗಿದಿದ್ದ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದವು.
ಬೋನಿನ ಬಳಿ ಎರಡು ಬಾರಿ ಸುಳಿದಿದ್ದ ದೃಶ್ಯಗಳೂ ಕಾಣಿಸಿದ್ದವು.
ಗಾಮನಗಟ್ಟಿ ಹಾಗೂ ವಿಮಾನ ನಿಲ್ದಾಣದ ಬಳಿ ಚಿರತೆ ಇರುವ ಸುದ್ದಿ ಕೇಳಿ, ಸುತ್ತಲಿನ ಬಡಾವಣೆ ಜನರಲ್ಲಿ ಆತಂಕ ಮೂಡಿತ್ತು.
ಈ ಮಧ್ಯೆ ಕಳೆದ 5 ದಿನಗಳಿಂದ ಚಿರತೆ ಕ್ಯಾಮರಾ ಟ್ರಾ್ಯಪ್​ಗಳಲ್ಲಿ ಕಾಣಿಸಿರಲಿಲ್ಲ. ಹೀಗಾಗಿ, ಚಿರತೆ ಇನ್ನೂ ವಿಮಾನ ನಿಲ್ದಾಣ ಆವರಣದ ಅರಣ್ಯ ಪ್ರದೇಶದಲ್ಲಿ ಇದೆಯೋ ಅಥವಾ ಇಲ್ಲವೋ ಎಂವುದನ್ನು ಅರಿತುಕೊಳ್ಳುವ ಉದ್ದೇಶದಿಂದ ಸೋಮವಾರ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಚಿರತೆ ಪ್ರಾಣಿಗಳನ್ನು ತಿಂದು ಅರ್ಧಕ್ಕೇ ಬಿಟ್ಟಿದ್ದ ಹಳೇಯ ಮಾಂಸದ ತುಂಡುಗಳು ಕಾಣಿಸಿದವು.
ಆದರೆ, ಇತ್ತೀಚೆಗೆ ತಿಂದು ಬಿಟ್ಟಿದ್ದ ಪ್ರಾಣಿಗಳ ತುಂಡುಗಳಾಗಲಿ ಅಥವಾ ಚಿರತೆಯ ಪಾದದ ಹೊಸ ಕುರುಹುಗಳಾಗಲಿ ಕಂಡುಬರಲಿಲ್ಲ.
ಸಧ್ಯಕ್ಕಂತೂ ಚಿರತೆ ವಿಮಾನ ನಿಲ್ದಾಣದಿಂದ ಕಾಲು ಕಿತ್ತಿದ್ದು, ಮತ್ತೆ ಬರುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
ಹೀಗಾಗಿ, ಈಗಾಗಲೇ ಇಟ್ಟಿರುವ ಬೋನುಗಳನ್ನಾಗಲಿ, ಕ್ಯಾಮರಾ ಟ್ರಾ್ಯಪ್​ಗಳನ್ನಾಗಲಿ ತೆಗೆಯುವುದಿಲ್ಲ.
ಇನ್ನೂ ಕೆಲ ದಿನ ಕ್ಯಾಮರಾ ಟ್ರಾ್ಯಪ್​ಗಳನ್ನು ಪರಿಶೀಲಿಸುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಾದ ಡಿಸಿಎಫ್ ವಿವೇಕ ಕವರಿ, ಎಎಫ್​ಒ ವಸಂತ ರೆಡ್ಡಿ, ಎಸಿಎಫ್ ಪರಿಮಳ, ಆರ್​ಎಫ್​ಒ ಆರ್.ಎಸ್. ಉಪ್ಪಾರ ಹಾಗೂ ಇನ್ನಿತರ ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ತೊಡಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net