ಕಾರಿನಲ್ಲಿ ತೆರಳುತ್ತಿದ್ದ ಕೆಲವರಿಗೆ ರಸ್ತೆ ಬದಿಯ ಹುಲ್ಲುಗಾವಲಿಯನಲ್ಲಿ ಚಿರತೆ ಕುಳಿತಿದ್ದು ಕಾಣಿಸಿದೆ. ಕಾರಿನ ಹೆಡ್ಲೈಟ್ ಬೆಳಕು ಚಿರತೆ ಮೇಲೆ ಬೀಳುತ್ತಿದ್ದಂತೆಯೇ ಸ್ಥಳದಿಂದ ಕಾಲ್ಕಿತ್ತಿದೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ತಂಡ ಸುತಗಟ್ಟಿ ಹೊರವಲಯದಲ್ಲಿ ಹುಡುಕಾಡಿದರೂ, ಚಿರತೆ ಕಾಣಿಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿರತೆ ಸೆರೆಗಾಗಿ ಮೈಸೂರಿನಿಂದ ಮತ್ತೊಂದು ದೊಡ್ಡ ಬೋನ್ ತರಿಸಿ, ಗಾಮನಗಟ್ಟಿ ಹೊರವಲಯದಲ್ಲಿ ಇಡಲಾಗಿದೆ. ಈ ಮಧ್ಯೆ ಧಾರವಾಡದಿಂದಲೂ ಮತ್ತೊಂದು ಬೋನ್ ತರಿಸಿ, ಸುತಗಟ್ಟಿ ಹೊರವಲಯದಲ್ಲಿ ಇಡಲಾಗಿದೆ.
ವಿಮಾನ ನಿಲ್ದಾಣ ಹಾಗೂ ಗಾಮನಗಟ್ಟಿ ಹೊರವಲಯದ ವಿವಿಧೆಡೆ ಅಳವಡಿಸಿರುವ ಕ್ಯಾಮರಾ ಟ್ರಾ್ಯಪರ್ಗಳ ಕಣ್ಣಿಗೂ ಬೀಳದೇ ಚಿರತೆ ವಿಮಾನ ನಿಲ್ದಾಣದಿಂದ ಹೊರಗೆ ಬಂದಿದೆ.
ಚಿರತೆ ಸೆರೆಗಾಗಿ ಅರಣ್ಯ ಇಲಾಖೆಗಾಗಿ 4 ತಂಡಗಳನ್ನು ರಚಿಸಿ, ನಿತ್ಯ ರಾತ್ರಿಯೆಲ್ಲ ಹುಡುಕಾಡುತ್ತಿದ್ದರೂ ಇದುವರೆಗೆ ಸಫಲವಾಗಿಲ್ಲ.