ಹಿರೇಹೊನ್ನಿಹಳ್ಳಿ ಬಳಿ ಚಿರತೆ ಪ್ರತ್ಯಕ್ಷ Leopard

ರಸ್ತೆ ದಾಟುತ್ತಿರುವ ಚಿರತೆ (Leopard )ದೃಶ್ಯ.
ರಸ್ತೆ ದಾಟುತ್ತಿರುವ ಚಿರತೆ (Leopard )ದೃಶ್ಯ.
Published on
ಕಲಘಟಗಿ: ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಮುತಗಿ ಏತ ನೀರಾವರಿ ರಸ್ತೆಯಲ್ಲಿ ಸೋಮವಾರ ಸಂಜೆ ಸುಮಾರಿಗೆ ಚಿರತೆ ಕಾಣಿಸಿಕೊಂಡಿದೆ.
ಮೆಕ್ಕೆಜೋಳದ ಹೊಲದೊಳಗಿಂದ ಬಂದ ಚಿರತೆ ರಸ್ತೆ ದಾಟಿ ಸಾಗಿದೆ. ಈ ದೃಶ್ಯವನ್ನು ಲಾರಿ ಚಾಲಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ಸುದ್ದಿ ಹರಡುತ್ತಿದ್ದಂತೆ ಗ್ರಾಮಸ್ಥರು ಭಯಗೊಂಡಿದ್ದಾರೆ.
ಹಿರೇಹೊನ್ನಿಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಎಮ್ಮೆಟ್ಟಿ ಅರಣ್ಯ ಪ್ರದೇಶದಲ್ಲಿ ಚಿರತೆ ಇರುವ ಮಾಹಿತಿ ಇದೆ. ಸೋಮವಾರ ಸಂಜೆ 7 ಗಂಟೆಯ ಸುಮಾರಿಗೆ ಚಿರತೆ ಕಂಡಿದೆ. ಇದೇ ಅರಣ್ಯ ಪ್ರದೇಶದಿಂದ ಬಂದಿರಬಹುದು ಎಂದು ಶಂಕಿಸಲಾಗಿದೆ.
ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಬಂದಿದೆ. ಚಿರತೆ ಪ್ರತ್ಯಕ್ಷವಾದ ಸ್ಥಳಕೆ ಭೇಟಿ ನೀಡಿ, ಹೆಜ್ಜೆ ಗುರುತು ಪರೀಕ್ಷಿಸಲಾಗುವುದು. ಚಿರತೆ ಸೆರೆ ಹಿಡಿಯಲಾಗುವುದು ಎಂದು ವಲಯ ಅರಣ್ಯಧಿಕಾರಿ ಅರುಣಕುಮಾರ ಅಷ್ಟಗಿ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net