Leopard ಹುಬ್ಬಳ್ಳಿ ವಿಮಾನ ನಿಲ್ದಾಣದ ಆವರಣದಲ್ಲಿ ಚಿರತೆ ಸೆರೆಗೆ ಸಿದ್ಧತೆ ನಡೆಸಿರುವ ಅರಣ್ಯ ಇಲಾಖೆ ಸಿಬ್ಬಂದಿ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಥರ್ಮಲ್ ದ್ರೋಣಗಳಿಂದ ರಾತ್ರಿಯೂ ಹುಡುಕಾಟ.
ತಡರಾತ್ರಿಯವರೆಗೂ ಚಿರತೆ (Leopard ) ಸೆರೆ ಕಾರ್ಯಾಚರಣೆ.
ಚಿರತೆಯ ಇರುವಿಕೆ ಪತ್ತೆಯಾಗಲಿಲ್ಲ.
ಚಿರತೆಯ ಚಲನವಲನಗಳನ್ನು ರಾತ್ರಿ ಸಮಯದಲ್ಲಿಯೂ ನಿಖರವಾಗಿ ಕಂಡುಹಿಡಿಯುವುದಕ್ಕಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ಹಾಗೂ ಮೈಸೂರು ಪ್ರಾಣಿ ಸಂಗ್ರಹಾಲಯದಿಂದ ಎರಡು ಥರ್ಮಲ್ ದ್ರೋಣ್ಗಳನ್ನು ತರಿಸಲಾಗಿದೆ.
ಇದರೊಂದಿಗೆ ಮೈಸೂರು ಹಾಗೂ ಗದಗ ಪ್ರಾಣಿಸಂಗ್ರಹಾಲದಿಂದ ಅರಳಿವಳಿಕೆ ತಜ್ಞರು, ಬೆಳಗಾವಿ ಪ್ರಾಣಿ ಸಂಗ್ರಹಾಲಯದಿಂದ ಪಶು ವೈದ್ಯರನ್ನು ಭಾನುವಾರದಂದು ಹುಬ್ಬಳ್ಳಿಗೆ ಕರೆಯಿಸಲಾಗಿದೆ.
ಚಿರತೆ ಪತ್ತೆಗೆ ವಿಮಾನ ನಿಲ್ದಾಣದಲ್ಲಿನ ಅರಣ್ಯ ಪ್ರದೇಶ ಹಾಗೂ ಗಾಮನಗಟ್ಟಿ ಹೊರವಲಯದಲ್ಲಿ ಕ್ಯಾಮರಾ ಟ್ರಾ್ಯಪ್ಗಳನ್ನು ಇಡಲಾಗಿದೆ.
ಚಿರತೆ ಈ ಕ್ಯಾಮರಾಗಳ ಎದುರು ಸಂಚರಿಸಿದಾಗ ಅದರ ಇರುವಿಕೆ ಪತ್ತೆಯಾಗುತ್ತಿತ್ತು. ಆದರೀಗ, ಥರ್ಮಲ್ ದ್ರೋಣ್ಗಳ ಸಹಾಯದಿಂದ ರಾತ್ರಿ ಸಮಯದಲ್ಲಿಯೂ ಚಿರತೆಯ ಇರುವಿಕೆಯನ್ನು ಪತ್ತೆ ಮಾಡಬಹುದಾಗಿದೆ.
ಭಾನುವಾರ ತಡರಾತ್ರಿಯವರೆಗೂ ಚಿರತೆ ಕಾರ್ಯಾಚರಣೆ ತಂಡದೊಂದಿಗೆ ಇಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಆದರೆ, ಚಿರತೆಯ ಇರುವಿಕೆ ಪತ್ತೆಯಾಗಲಿಲ್ಲ.
ಈ ಮಧ್ಯೆ ಗಾಮನಗಟ್ಟಿಯಲ್ಲಿ ಚಿರತೆಯು ಆಕಳಿನ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆಯಾದರೂ, ಇದುವರೆಗೆ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಪಶುವೈದ್ಯರ ಪರಿಶೀಲನೆ ನಂತರವೇ ಈ ಬಗ್ಗೆ ನಿಖರವಾಗಿ ಹೇಳಬಹುದು ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.