ಮನವಿ: ತುಮ್ಮರಿಕೊಪ್ಪ ಗ್ರಾಮದ ಅರಣ್ಯದಂಚಿನ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲೂ ಸೋಲಾರ್ ಫೆನ್ಸಿಂಗ್ (ವಿದ್ಯುತ್ ಬೇಲಿ) ಅಳವಡಿಸಲು ಗ್ರಾಮಸ್ಥರ ಅರಣ್ಯ ಇಲಾಖೆಗೆ ಶನಿವಾರ ಮನವಿ ಸಲ್ಲಿಸಿದರು. ನಮ್ಮ ಗ್ರಾಮದಲ್ಲಿ ಅನೇಕ ಹೊಲಗಳಿಗೆ ಚಿರತೆ, ಕಾಡು ಹಂದಿ, ಮುಳ್ಳುಹಂದಿ, ಜಿಂಕೆ, ಮಂಗ ಮುಂತಾದ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿರುವುದರಿಂದ ರೈತರ ಬೆಳೆಗಳು ನಾಶ ಮಾಡುತ್ತಿವೆ. ರೈತರು ತಮ್ಮ ಮನೆಯ ಕೆಲಸ ಮಾಡುವುದು ಬಿಟ್ಟು ಹಗಲು-ರಾತ್ರಿ ಪ್ರಾಣಿಗಳ ಕಾಯುವುದೆ ಆಗಿದೆ. ಆದ್ದರಿಂದ ಕೂಡಲೆ ಸೋಲಾರ್ ಫೆನ್ಸಿಂಗ್ ಅಳವಡಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.