ಸರ್ವಾಧ್ಯಕ್ಷರಾಗಿ ಲೀಲಾದೇವಿ ಪ್ರಸಾದ ಆಯ್ಕೆ president

president  ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಹತ್ತನೆಯ ರಾಜ್ಯಮಟ್ಟದ ಲೇಖಕಿಯರ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಚಿಂತಕಿ, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಅವರನ್ನು ಆಯ್ಕೆ .
president ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಹತ್ತನೆಯ ರಾಜ್ಯಮಟ್ಟದ ಲೇಖಕಿಯರ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಚಿಂತಕಿ, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಅವರನ್ನು ಆಯ್ಕೆ .
Published on

ಪ್ರಮುಖ ಮುಖ್ಯಾಂಶಗಳು

  • ಆ. 13ಕ್ಕೆ ಕಚುಸಾಪ 10ನೇ ರಾಜ್ಯಮಟ್ಟದ ಲೇಖಕಿಯರ ಸಮ್ಮೇಳನ.
ಹುಬ್ಬಳ್ಳಿ :
ಧಾರವಾಡದಲ್ಲಿ ಜನಿಸಿದ ಲೀಲಾದೇವಿ ಅವರು ವಚನ ಸಾಹಿತ್ಯದಲ್ಲಿ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ.
ಜೆ.ಎಚ್. ಪಟೇಲ್ ಸಂಪುಟದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವರಾಗಿದ್ದ ಅವರು, ಅಕ್ಕಮಹಾದೇವಿ ಚರಿತ್ರೆ ಕುರಿತಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಮಾಧ್ಯಮ ಮತ್ತು ಮಹಿಳಾ ಸಬಲೀಕರಣ ಹೋರಾಟದ ನಾಯಕತ್ವ ವಹಿಸಿದ್ದಾರೆ.
ಆಗಷ್ಟ್ 13ರಂದು ಬೆಳಗ್ಗೆ 10.30ಕ್ಕೆ ಗದಗ ಜಿಲ್ಲೆಯ ಮುಂಡರಗಿಯ ಅನ್ನದಾನೇಶ್ವರ ಸಂಸ್ಥಾನಮಠದ ಸಭಾಂಗಣದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಹತ್ತನೆಯ ರಾಜ್ಯಮಟ್ಟದ ಲೇಖಕಿಯರ ಸಮ್ಮೇಳನ ಆಯೋಜಿಸಲಾಗಿದೆ.
ಮಹಿಳಾ ಪರ ಚಿಂತನಾ ಗೋಷ್ಟಿ , ಚುಟುಕು ವಾಚನ ಗೋಷ್ಟಿಯ ಆಸಕ್ತರು ಜು. 25ರೊಳಗೆ ಸಂರ್ಪಸುವಂತೆ ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡಶೆಟ್ರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net