2022-23 ಮತ್ತು 2023-24 ನೇ ಸಾಲಿನ 4,053 ವಿದ್ಯಾರ್ಥಿಗಳು ಹಾಗೂ 3,663 ವಿದ್ಯಾರ್ಥಿನಿಯರು ಸೇರಿ ಒಟ್ಟು 7,716 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾವುದು. ವಿಶ್ವವಿದ್ಯಾಲಯದಿಂದ 20 ಮತ್ತು ದಾನಿಗಳಿಂದ 8 ಸೇರಿದಂತೆ ಒಟ್ಟು 28 ಚಿನ್ನದ ಪದಕಗಳನ್ನು ನೀಡಲಾಗುವುದು. ಪ್ರತಿ ಕೋರ್ಸ್ಗೆ 10 ರ್ಯಾಂಕ್ ಪ್ರಮಾಣ ಪತ್ರಗಳಂತೆ ಒಟ್ಟು 150 ರ್ಯಾಂಕ್ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು ಎಂದು ವಿವರಿಸಿದರು.