(laptop theft) ಆಂಧ್ರದಲ್ಲಿ ಸಿಕ್ಕಿಬಿದ್ದ ಲ್ಯಾಪ್‌ಟಾಪ್ ಕಳ್ಳರು

(laptop theft) ಲ್ಯಾಪ್‌ಟಾಪ್ ವಶಪಡಿಸಿಕೊಂಡಿರುವುದು.
(laptop theft) ಲ್ಯಾಪ್‌ಟಾಪ್ ವಶಪಡಿಸಿಕೊಂಡಿರುವುದು.
Published on
ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಸೇರಿ ಇತರೆಡೆಯ ಪೇಯಿಂಗ್ ಗೆಸ್ಟ್ (ಪಿಜಿ)ಗಳನ್ನು ಹೊಕ್ಕು ಲ್ಯಾಪ್‌ಟಾಪ್ ಕದಿಯುತ್ತಿದ್ದ (laptop theft) ಅಂತಾರಾಜ್ಯ ಕಳ್ಳರನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ವೆಂಕಟಗಿರಿ ಕೋಟಾ ನಿವಾಸಿಗಳಾದ ಸತ್ಯವೇಲು ಚೌಡೇಪಲ್ಲಿ, ಸರವಣ ಚೌಡೇಪಲ್ಲಿ ಬಂಧಿತರು. ಬಂಧಿತರಿಂದ 5.40 ಲಕ್ಷ ರೂ. ಮೌಲ್ಯದ 6 ಲ್ಯಾಪ್‌ಟಾಪ್, 12 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.
ಪೇಯಿಂಗ್ ಗೆಸ್ಟ್‌ಗಳಿಗೆ ವಿದ್ಯಾರ್ಥಿಗಳ ಸೋಗಿನಲ್ಲಿ ತೆರಳುತ್ತಿದ್ದ ಇವರು, ಅಲ್ಲಿದ್ದ ಲ್ಯಾಪ್‌ಟಾಪ್‌ಗಳನ್ನು ಕದ್ದು ಸದ್ದಿಲ್ಲದೆ ಪರಾರಿಯಾಗುತ್ತಿದ್ದರು. ಈ ಕುರಿತು ‘ವಿಜಯವಾಣಿ’ಯಲ್ಲಿ ಜ. 14ರಂದು ವಿಶೇಷ ವರದಿ ಪ್ರಕಟಿಸಿತ್ತು.
ವಿದ್ಯಾನಗರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಜಾಕ್ಸನ್ ಡಿಸೋಜಾ ಮಾರ್ಗದರ್ಶನದಲ್ಲಿ ಪ್ರಕರಣದ ಬೆನ್ನು ಬಿದ್ದ ಪಿಎಸ್‌ಐಗಳಾದ ಪುನೀತಕುಮಾರ, ಎಂ. ಸುನೀಲ್, ಸಿಬ್ಬಂದಿ ಪರಶುರಾಮ ಹಿರಗನ್ನವರ, ಶಿವಾನಂದ ತಿರಕಣ್ಣವರ, ಅನಿಲ ಹುಗ್ಗಿ, ಅರುಣ ಹೊಸಗೌಡರ, ಸಂತೋಷ ಅಡ್ನೂರ, ಬಸವರಾಜ ಬಾವಿಹಾಳ, ರಾಕೇಶ ಬಟಕುರ್ಕಿ, ಸಂಜುರೆಡ್ಡಿ ಕಣಬೂರ, ಮಂಜುನಾಥ ಕಮತರ್, ಗೋಪಿ ಕರಿಪೂಜಾರ ನೇತೃತ್ವದ ತಂಡ ಆಂಧ್ರಪ್ರದೇಶಕ್ಕೆ ತೆರಳಿ ಇವರಿಬ್ಬರನ್ನು ಬಂಧಿಸಿದೆ.
ತಾಂತ್ರಿಕ ಮಾಹಿತಿ ಹಾಗೂ ಮೊಬೈಲ್ ಟ್ರ್ಯಾಕಿಂಗ್ ಆಧರಿಸಿ ಪೊಲೀಸ್ ಸಿಬ್ಬಂದಿ ಆಂಧ್ರಪ್ರದೇಶಕ್ಕೆ ತೆರಳಿ ಕಾರ್ಯಾಚರಣೆ ನಡೆಸಿತ್ತು. ಬಂಧಿತರಿಬ್ಬರು ವಿದ್ಯಾರ್ಥಿಗಳ ವೇಷದಲ್ಲಿ ಪಿಜಿಯೊಳಗೆ ನುಗ್ಗುತ್ತಿದ್ದರು. ಅಲ್ಲದೇ ಕಾಲೇಜ್‌ಗಳಿಗೂ ತೆರಳಿ ಲ್ಯಾಪ್‌ಟಾಪ್ ಕದಿಯುತ್ತಿದ್ದರ ಕುರಿತು ಖದೀಮರು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net