ಬೋವಿ ನಿಗಮದಲ್ಲಿ ಭೂ ಅಕ್ರಮ

ರೈತೋದಯ ಹಸಿರು ಸೇನೆಯ ಆಕ್ಷೇಪ
ಸೇನೆಯ ಮಹಿಳಾ ವಿಭಾಗದ ಉಪಾಧ್ಯಕ್ಷೆ ಮಧು ಪಟ್ಟಣಶೆಟ್ಟಿ ಮಾತನಾಡಿದರು. ಕುಸುಮಾ, ಜಗದೇವಿ ಮಾಳಿ, ನೇತ್ರಾ ಗೋಷ್ಠಿಯಲ್ಲಿದ್ದರು.
ಸೇನೆಯ ಮಹಿಳಾ ವಿಭಾಗದ ಉಪಾಧ್ಯಕ್ಷೆ ಮಧು ಪಟ್ಟಣಶೆಟ್ಟಿ ಮಾತನಾಡಿದರು. ಕುಸುಮಾ, ಜಗದೇವಿ ಮಾಳಿ, ನೇತ್ರಾ ಗೋಷ್ಠಿಯಲ್ಲಿದ್ದರು.
Published on: 

ಹುಬ್ಬಳ್ಳಿ: ರಾಯಚೂರು ಜಿಲ್ಲೆಯಲ್ಲಿ ಬೋವಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಭೂ ಕಬಳಿಕೆ ವಿರುದ್ಧ ಪ್ರತಿಭಟನೆ ನಡೆಸಿದ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಅಧ್ಯಕ್ಷ ಚಂದ್ರಶೇಖರ ಟಿ.ಬಿ. ಅವರ ವಿರುದ್ಧ ಸುಳ್ಳು ಎಫ್ ಐಆರ್​ ದಾಖಲಿಸಲಾಗಿದೆ ಎಂದು ಸೇನೆಯ ಮಹಿಳಾ ವಿಭಾಗದ ಉಪಾಧ್ಯಕ್ಷೆ ಮಧು ಪಟ್ಟಣಶೆಟ್ಟಿ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗಮದಿಂದ ಬೋವಿ ಸಮುದಾಯದ ಬಡವರಿಗೆ ನೀಡಿರುವ ಜಮೀನಿನಲ್ಲಿ ಬೃಹತ್​ ಮಟ್ಟದ ಕಬಳಿಕೆ ನಡೆದಿದೆ. ಯಾವುದೇ ಬೆಳೆ ಬೆಳೆಯಲು ಬಾರದ ಬರಡು ಜಮೀನು ಲಾನುಭವಿಗಳಿಗೆ ನೀಡಿ ಕೋಟ್ಯಂತರ ರೂ. ಅಕ್ರಮ ಎಸಗಲಾಗಿದೆ ಎಂದು ದೂರಿದರು.

ಈ ಅಕ್ರಮವನ್ನು ಬಯಲಿಗೆಳೆಯಲು ಮುಂದಾದ ಸೇನೆಯ ಅಧ್ಯಕ್ಷ ಚಂದ್ರಶೇಖರ ಅವರ ವಿರುದ್ಧವೇ ಕೆಲ ಅಧಿಕಾರಿಗಳು, ಮುಖಂಡರು ಪ್ರಕರಣ ದಾಖಲಿಸಿದ್ದಾರೆ. ಇದನ್ನು ರದ್ದು ಪಡಿಸಬೇಕು.

ಇಂತಹ ಬೆದರಿಕೆಗಳ ಮೂಲಕ ಪ್ರಕರಣ ಮುಚ್ಚಿಹಾಕಲು ಕೆಲವರು ಹೊಂಚು ಹಾಕಿದ್ದು, ಇಂತಹ ಅಕ್ರಮವನ್ನು ಸರ್ಕಾರ ಮಟ್ಟ ಹಾಕಬೇಕು. ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಮಾಡಲಾಗಿದೆ ಎಂದು ಪಟ್ಟಣಶೆಟ್ಟಿ ಹೇಳಿದರು.

ದುಷ್ಕೃತ್ಯದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ಸೇನೆಯ ಕುಸುಮಾ, ಜಗದೇವಿ ಮಾಳಿ, ನೇತ್ರಾ ಇತರರು ಗೋಷ್ಠಿಯಲ್ಲಿದ್ದರು.