land fraud ತಮ್ಮದಲ್ಲದ ಜಮೀನು ಮಾರಿದ ಖದೀಮರು

ಪೊಲೀಸ್ ಠಾಣೆಯಲ್ಲಿ ಪ್ರಕರಣ land fraud
ಪೊಲೀಸ್ ಠಾಣೆಯಲ್ಲಿ ಪ್ರಕರಣ land fraud
Published on
ಹುಬ್ಬಳ್ಳಿ: ತಮ್ಮದಲ್ಲದ ಭೂಮಿಯನ್ನು ತಮ್ಮದೆಂದು ಹೇಳಿಕೊಂಡಿದಲ್ಲದೆ ಕಡಿಮೆ ದರದಲ್ಲಿ ಪ್ಲಾಟ್‌ಗಳನ್ನು ಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 20 ಲಕ್ಷ ರೂ. ಪಡೆದು ಪ್ಲಾಟ್ ಹಾಗೂ ಮರಳಿ 9.50 ಲಕ್ಷ ರೂ. ಹಣ ಕೊಡದೆ ಮೋಸ ಮಾಡಿದ land fraud ಆರೋಪದಡಿ ನಾಲ್ವರ ವಿರುದ್ಧ ಇಲ್ಲಿಯ ಕಸಾಬಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ರಮೇಶ ಎಚ್., ಮಂಜುನಾಥ ಎಚ್., ಶಂಕರ ಎಂ., ರಮೇಶ ಕೆ. ಎಂಬುವವರ ವಿರುದ್ಧ ಹರೀಶ ಹಳಪೇಟೆ ಎಂಬುವವರು ಪ್ರಕರಣ ದಾಖಲಿಸಿದ್ದಾರೆ.
ಸಂಘವೊಂದಕ್ಕೆ 8.50 ಲಕ್ಷ ರೂ.ಗೆ 1989ರಲ್ಲಿ ಹಳೇಹುಬ್ಬಳ್ಳಿ ಅಯೋಧ್ಯಾ ಗ್ರಾಮದ ಏಳು ಎಕರೆ ಭೂಮಿಯನ್ನು ಮಾರಾಟ ಮಾಡಿದ್ದಾರೆ. 1990ರಲ್ಲಿ ಗಂಗಾಧರ ಮತ್ತು ಬಸವರಾಜ ಎಂಬುವವರು ಎಸ್‌ಸಿ, ಎಸ್ಟಿ ಹಾಗೂ ಹಿಂದುಳಿದ ಸದಸ್ಯರಿಗೆ ಪ್ಲಾಟ್ ನೀಡುವುದಾಗಿ ಬಿನ್‌ಶೇತ್ಕಿ ಮಾಡಿಸಿದ್ದಾರೆ. ಆದರೆ. ಈ ವ್ಯವಹಾರ ಆರೋಪಿಗಳಿಗೆ ಸಂಬಂಧವಿಲ್ಲದಿದ್ದರೂ ಈ ಜಮೀನು ತೋರಿಸಿ 12-15 ಲಕ್ಷ ರೂ.ಗೆ ಪ್ಲಾಟ್ ಕೊಡುವುದಾಗಿ ಹರೀಶ ಹಾಗೂ ಅವರ ಅಳಿಯಂದರಿಂದ 10 ಪ್ಲಾಟ್‌ಗಳಿಗೆ 20 ಲಕ್ಷ ರೂ. ಮುಂಗಡವಾಗಿ ಪಡೆದುಕೊಂಡಿದ್ದಾರೆ. ನಂತರ ಭೂಮಿ ಮಾಲೀಕರು ಬೇರೆ ಇರುವುದಾಗಿ ತಿಳಿದು ಬಂದಾಗ ಪ್ರಶ್ನೆ ಮಾಡಿದಾಗ 10.50 ಲಕ್ಷ ರೂ. ಮರಳಿಸಿದ್ದು, 9.50 ಲಕ್ಷ ರೂ. ಕೊಡದೆ ಮೋಸ ಮಾಡಿದ್ದಲ್ಲದೆ, ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net