ಶ್ರೀ ಸಿದ್ಧಾರೂಢಮಠದಲ್ಲಿ ಲಕ್ಷದೀಪೋತ್ಸವ (Deepotsava)

ಸಿದ್ಧಾರೂಢಮಠದಲ್ಲಿ ಲಕ್ಷದೀಪೋತ್ಸವ (Deepotsava)
ಸಿದ್ಧಾರೂಢಮಠದಲ್ಲಿ ಲಕ್ಷದೀಪೋತ್ಸವ (Deepotsava)
Published on

ಪ್ರಮುಖ ಮುಖ್ಯಾಂಶಗಳು

  • ನ. 20ರಂದು ಸಂಜೆ 6.30ಕ್ಕೆ ಲಕ್ಷದೀಪೋತ್ಸವ
  • 40 ರಿಂದೆ 50 ಸಾವಿರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ
  • ಪ್ರತಿ ಅಮವಾಸ್ಯೆಯಂದು ಆರೂಢ ಆರತಿ ನಡೆಯಲಿದೆ
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶ್ರೀಮಠದ ಟ್ರಸ್ಟ್ ಕಮೀಟಿ ಅಧ್ಯಕ್ಷ ಚನ್ನವೀರ ಮುಂಗುರವಾಡಿ, ಶ್ರೀಮಠದ ಟ್ರಸ್ಟ್ ಕಮೀಟಿ ಮುಖ್ಯ ಆಡಳಿತಾಧಿಕಾರಿಯಾದ ಧಾರವಾಡ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಲಕ್ಷದೀಪೋತ್ಸವಕ್ಕೆ ಚಾಲನೆ ನೀಡುವರು ಎಂದರು.
ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ಮಹಾರಾಷ್ಟ್ರ, ಆಂದ್ರಪ್ರದೇಶ, ಗೋವಾ ಹಾಗೂ ಇನ್ನಿತರೆಡೆಯ 40 ರಿಂದೆ 50 ಸಾವಿರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಧ್ಯರಾತ್ರಿವರೆಗೂ ಲಕ್ಷದೀಪೋತ್ಸವ ನಡೆಯಲಿದೆ ಎಂದು ತಿಳಿಸಿದರು.
ಭಕ್ತರಿಗೆ ಕುಡಿಯುವ ನೀರಿನ ಸೌಲಭ್ಯ, ವೈದ್ಯಕೀಯ ಸೌಕರ್ಯದ ಜತೆಗೆ ಹಲವಾರು ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಮಧ್ಯರಾತ್ರಿ 2 ಗಂಟೆ ನಂತರವೂ ಮಹಾಪ್ರಸಾದದ ವ್ಯವಸ್ಥೆ ಇರುತ್ತದೆ ಎಂದು ಹೇಳಿದರು.
ಈಗಾಗಲೇ ಸಕಾರದ ಅನುದಾನ ಹಾಗೂ ಶ್ರೀಮಠದ ಸಂಪನ್ಮೂಲಗಳಿಂದ ಹಲವಾರು ಕಾಯಂ ಸೌಲಭ್ಯಗಳನ್ನು ನಿರ್ವಿುಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಬಡ ಮಕ್ಕಳಿಗಾಗಿ ಹಾಸ್ಟೆಲ್ ನಿರ್ವಿುಸುವ ಉದ್ದೇಶವಿದೆ. 5 ಕೋಟಿ ರೂ. ವೆಚ್ಚದಲ್ಲಿ 4 ಮಹಡಿಯ ಕಟ್ಟಡ ನಿರ್ವಿುಸುವ ಯೋಜನೆ ಇದೆ. ಇದರಲ್ಲಿ ಕೆಳ ಮಹಡಿಯಲ್ಲಿ ಅಂಗಡಿಕಾರರಿಗೆ ಮಳಿಗೆಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಗಂಗಾ ಆರತಿ ಮಾದರಿಯಲ್ಲಿ ನ. 27ರಂದು ಶ್ರೀಮಠದ ಆವರಣದಲ್ಲಿ ಆರೂಢ ಆರತಿ ಪ್ರಾರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಪ್ರತಿ ಅಮವಾಸ್ಯೆಯಂದು ಆರೂಢ ಆರತಿ ನಡೆಯಲಿದೆ ಎಂದು ಹೇಳಿದರು.
ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ, ಚಿಕ್ಕ ಮಗುವಿನ ತಾಯಿಗೆ ಶ್ರೀ ಸಿದ್ಧಾರೂಢರ ಹಾಗೂ ಶ್ರೀ ಗುರುನಾಥ ರೂಢರ ನೇರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಮಗುವಿಗೆ ಹಾಲುಣಿಸುವ ತಾಯಿಗಾಗಿ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಒದಗಿಸಲಾಗುವುದು ಎಂದು ತಿಳಿಸಿದರು.
ಶ್ರೀ ಮಠದ ಆವರಣವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಲು ಕುಂಡಗಳಲ್ಲಿ ಸಸಿ ಬೆಳೆಸಲಾಗುವುದು ಎಂದರು.
ಶ್ರೀ ಮಠದ ಟ್ರಸ್ಟ್ ಕಮೀಟಿ ವೈಸ್ ಚೇರ್ಮನ್ ವಿನಾಯಕ ಘೋಡಕೆ, ಗೌರವ ಕಾರ್ಯದರ್ಶಿ ರಮೇಶ ಬೆಳಗಾವಿ, ಧರ್ಮದರ್ಶಿಗಳಾದ ಡಾ. ಗೋವಿಂದ ಮಣ್ಣೂರ, ವೀರಪ್ಪ ಮಲ್ಲಾಪುರ, ಬಸವರಾಜ ಕಲ್ಯಾಣಶೆಟ್ಟರ, ಬಾಳು ಮಗಜಿಕೊಂಡಿ, ಉದಯಕುಮಾರ ನಾಯಕ, ಗೀತಾ ಕಲಬುರ್ಗಿ, ವಸಂತ ಸಾಲಗಟ್ಟಿ, ಮ್ಯಾನೇಜರ್ ಈರಣ್ಣ ತುಪ್ಪದ ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net