kyc fraud ಕೆವೈಸಿ ಅಪ್‌ಡೇಟ್ ಹೆಸರಲ್ಲಿ ವಂಚನೆ

kyc fraud ಸಿಇಎನ್ ಕ್ರೈಂ ಠಾಣೆ
kyc fraud ಸಿಇಎನ್ ಕ್ರೈಂ ಠಾಣೆ
Published on

ಹುಬ್ಬಳ್ಳಿ: ಆ್ಯಕ್ಸಿಸ್ ಬ್ಯಾಂಕ್ ಕೆವೈಸಿ kyc fraud ಅಪಡೇಟ್ ಹೆಸರಿನಲ್ಲಿ ಎಪಿಕೆ ಪೈಲ್ ಕಳುಹಿಸಿ ನಗರದ ಖಾಸಗಿ ನೌಕರರೊಬ್ಬರ ಬ್ಯಾಂಕ್ ಖಾತೆಯಿಂದ 4.58 ಲಕ್ಷ ರೂ. ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಲಾಗಿದೆ.

ಹುಬ್ಬಳ್ಳಿಯಿಂದ ದಾವಣಗೆರೆಗೆ ಹೋಗಲು ರೈಲ್ವೆ ಸ್ಟೇಷನ್ ಹತ್ತಿರ ಇದ್ದಾಗ ಅಪರಿಚಿತರು ವಾಟ್ಸ್‌ಆ್ಯಪ್‌ನಿಂದ ವಿಡಿಯೋ ಕರೆ ಮಾಡಿ ನಿಮ್ಮ ಬ್ಯಾಂಕ್ ಕೆವೈಸಿ ಅಪಡೇಟ್ ಮಾಡುವುದಿದೆ. ನಾನು ಕಳುಹಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಂದು ಮೊಬೈಲ್ ಫೋನ್‌ನಲ್ಲಿ ಆ್ಯಕ್ಸಿಸ್ ಬ್ಯಾಂಕ್ ಕೆವೈಸಿ ಅಪಡೇಟ್ ಎಂಬ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿಸಿದ್ದಾರೆ. 4,58,503 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net