kumar hakari ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಮೌನ ಧರಣಿ

kumar hakari ಉತ್ತರ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಸುದ್ದಿಗೋಷ್ಠಿ
kumar hakari ಉತ್ತರ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಸುದ್ದಿಗೋಷ್ಠಿ
Published on
ಹುಬ್ಬಳ್ಳಿ: ಪ್ರತ್ಯೇಕ ಉತ್ತರ ಕಲ್ಯಾಣ ಕರ್ನಾಟಕ ರಾಜ್ಯ ರಚನೆಗೆ ಆಗ್ರಹಿಸಿ ಜು. 9ರಂದು ಬೆಳಗ್ಗೆ 10ಕ್ಕೆ ನಗರದಲ್ಲಿ ಮೌನ ಧರಣಿ ನಡೆಸಲಾಗುವುದು ಎಂದು ಉತ್ತರ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಕುಮಾರ ಹಕಾರಿ kumar hakari ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ನಗರದ ಚನ್ನಮ್ಮ ಮೂರ್ತಿ ಹಾಗೂ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡಲಾಗುವುದು. ಅಲ್ಲಿಂದ ಅಂಬೇಡ್ಕರ್ ಸರ್ಕಲ್‌ಗೆ ತೆರಳಿ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ಮಧ್ಯಾಹ್ನ 2ರವರೆಗೆ ಮೌನ ಧರಣಿ ನಡೆಸಲಾಗುವುದು ಎಂದರು.
ಉತ್ತರ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ರಾಜ್ಯದಲ್ಲಿಯೇ ಅತಿ ಹಿಂದುಳಿದಿವೆ. ರಾಜ್ಯಕ್ಕೆ ಅನ್ನ, ವಿದ್ಯುತ್, ಚಿನ್ನ ಕೊಡುವ ಜಿಲ್ಲೆಗಳು ನಮ್ಮಲ್ಲಿವೆ. ಹಾಗಾಗಿ ಈ ಪ್ರದೇಶ ಅಭಿವೃದ್ಧಿ ಹೊಂದಬೇಕಾದರೆ, ಪ್ರತ್ಯೇಕ ರಾಜ್ಯವಾಗಲೇಬೇಕು. ಈ ನಿಟ್ಟಿನಲ್ಲಿ ಸದ್ಯ ಮೌನ ಧರಣಿ ನಡೆಸಿ ಮುಂದಿನ ದಿನಗಳಲ್ಲಿ ಆಯಾ ಜಿಲ್ಲೆಗಳಲ್ಲಿ ಹೋರಾಟ ಆರಂಭಿಸಲಾಗುವುದು ಎಂದರು.
ಪ್ರಮುಖರಾದ ಡಾ. ಈರಪ್ಪ ಎಮ್ಮಿ, ಕಿರಣ ರಡ್ಡೇರ, ಸಂಜೀವಗೌಡ ಮಾಳಗಿ, ಶಿವರೆಡ್ಡಿ ರಡ್ಡೇರ, ಹರೀಶ ಗುಂಟ್ರಾಳ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net