ksss ಎಲ್ಲ ವಸ್ತುಗಳಲ್ಲಿಯೂ ದೇವರು ಕಾಣಿರಿ

ಹುಬ್ಬಳ್ಳಿಯ ksss ಕೆಎಸ್‌ಎಸ್‌ಎಸ್ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಡಾ. ಸತ್ಯಮೂರ್ತಿ ಆಚಾರ್ಯ ಉದ್ಘಾಟಿಸಿದರು.
ಹುಬ್ಬಳ್ಳಿಯ ksss ಕೆಎಸ್‌ಎಸ್‌ಎಸ್ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಡಾ. ಸತ್ಯಮೂರ್ತಿ ಆಚಾರ್ಯ ಉದ್ಘಾಟಿಸಿದರು.
Published on
ಹುಬ್ಬಳ್ಳಿ: ಇಲ್ಲಿಯ ಬುಡರಸಿಂಗಿಯ ಕರ್ನಾಟಕ ಶಿಕ್ಷಣ ಸೇವಾ ಸಮಿತಿಯ ಕೆಎಸ್‌ಎಸ್‌ಎಸ್ ksss ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್‌ನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಶನಿವಾರ ಏರ್ಪಡಿಸಲಾಗಿತ್ತು.
ಕಾಲೇಜ್ ಕಾರ್ಯದರ್ಶಿ ಡಾ. ಸತ್ಯಮೂರ್ತಿ ಆಚಾರ್ಯ ಉದ್ಘಾಟಿಸಿ ಮಾತನಾಡಿ, ನಮ್ಮ ದೇಶದ ಸಂಸ್ಕೃತಿಗೆ ತಕ್ಕಂತೆ ಗಣಹೋಮ, ವೇದವ್ಯಾಸ ಹೋಮ-ಹವನ ಮಾಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿರುವುದು ಒಳ್ಳೆಯ ಬೆಳವಣಿಗೆ. ಎಲ್ಲ ವಸ್ತುಗಳಲ್ಲಿ ದೇವರನ್ನು ಕಾಣುವ ಮನೋಭಾವ ಮಕ್ಕಳು ರೂಢಿಸಿಕೊಳ್ಳಬೇಕು ಎಂದರು.
ಡಾ. ಅಶೋಕ ಚಚಡಿ ಮಾತನಾಡಿ, ಮಕ್ಕಳು ಉತ್ತಮ ಅಂಕಗಳಿಸಲು ಉಪನ್ಯಾಸಕರ ಶ್ರಮವನ್ನು ವಿವರಿಸಿದರು.
ಗೌರವ ಕಾರ್ಯಾಧ್ಯಕ್ಷ ಶ್ರೀಕಾಂತ ಕೆಮ್ತೂರ, ಪ್ರಾಚಾರ್ಯ ಮಹೇಂದ್ರ ಜಿ.ಎ. ಮಾತನಾಡಿದರು.
ಜಂಟಿ ಕಾರ್ಯದರ್ಶಿಗಳಾದ ಗೋಪಾಲ ಕುಲಕರ್ಣಿ, ಗೋವಿಂದ ಮೈಸೂರು, ಉಪ ಕಾರ್ಯಾಧ್ಯಕ್ಷ ಎ.ಸಿ.ಗೋಪಾಲ, ಸದಸ್ಯರಾದ ಡಾ.ವಿ.ಜಿ. ನಾಡಗೌಡರ, ಶ್ರೀಪತಿ ಐತಾಳ, ಕೃಷ್ಣರಾಜ ಕೆಮ್ತೂರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net