ksss college ಕೆಎಸ್ಎಸ್ಎಸ್ ಕಾಲೇಜಿಗೆ ಪೇಜಾವರ ಶ್ರೀ ಭೇಟಿ
ksss college ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪಿಯುಸಿ ವಿದ್ಯಾರ್ಥಿಗಳಿಗೆ ಆಶೀರ್ವಚನ
ಪುಸ್ತಕ ಅಧ್ಯಯನವಷ್ಟೇ ವಿದ್ಯೆಯಲ್ಲ
ಹುಬ್ಬಳ್ಳಿ: ksss college ಇಲ್ಲಿಯ ಬುಡರಸಿಂಗಿ ಬಳಿಯ ಕರ್ನಾಟಕ ಶಿಕ್ಷಣ ಸೇವಾ ಸಮಿತಿಯ ಕೆ.ಎಸ್.ಎಸ್.ಎಸ್. ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯಕ್ಕೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳು ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದರು.
ಶೈಕ್ಷಣಿಕ ಸಾಲಿನ ಪಿಯು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ವಿದ್ಯೆ ಎಂದರೆ ಆಧ್ಯಾತ್ಮಿಕ ಸಂಸಾರ ಬಂಧನದಿಂದ ಬಿಡುಗಡೆ ಹೊಂದುವುದಾಗಿದೆ. ವಿದ್ಯೆಯನ್ನು ಬರಿ ಆಧ್ಯಾತ್ಮಿಕವಾಗಿ ತೆಗೆದುಕೊಳ್ಳಬಾರದು. ವ್ಯಾಪಕ ಅಥವಾ ವಿಶಾಲ ದೃಷ್ಟಿಕೋನದಿಂದ ತೆಗೆದುಕೊಂಡಾಗ ಭೌತಿಕ ಜೀವನದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪೂರಕವಾಗುತ್ತದೆ ಎಂದರು.
ಕೇವಲ ಪಠ್ಯ ಪುಸ್ತಕ ಅಧ್ಯಯನದಿಂದ ಸಂಪಾದಿಸುವುದೇ ವಿದ್ಯೆಯಲ್ಲ, ಪ್ರತಿಭೆಯ ಬಲದಿಂದ ಜೀವನದ ಸಮಸ್ಯೆ ಬಗೆಹರಿಸಿಕೊಂಡು ಸಾಧನ ಮಾರ್ಗಕ್ಕೆ ಹೋಗುವುದೇ ನಿಜವಾದ ವಿದ್ಯೆಯಾಗಿದೆ ಎಂದು ತಿಳಿಸಿದರು.
ಮುಖ್ಯವಾಗಿ ಶಿಕ್ಷಣವನ್ನು ಪಡೆಯಬೇಕಾದರೆ ಪ್ರಾಮಾಣಿಕ ಪ್ರಯತ್ನದ ಜೊತೆಗೆ ದೇವರ ಅನುಗ್ರಹವು ಅಷ್ಟೇ ಮುಖ್ಯ ಎಂಬುವುದನ್ನು ಭಗವದ್ಗೀತೆಯ ಕೃಷ್ಣನ ಹಾಗೂ ಅರ್ಜುನನ ಕಥೆಯೊಂದಿಗೆ ವಿವರಿಸಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಸತ್ಯಮೂರ್ತಿ ಆಚಾರ್ಯರು ಮಾತನಾಡಿ, ಸ್ವಾಮೀಜಿಯವರಿಗೆ ಮಕ್ಕಳ ಮೇಲೆ ಎಷ್ಟು ಪ್ರೀತಿಯೆಂದರೆ ಅವರ ಬಿಡುವಿಲ್ಲದ ಕಾರ್ಯಗಳ ಮಧ್ಯೆಯೂ ಸಂಸ್ಥೆಗೆ ಬಂದು ಆಶೀರ್ವಚನ ನೀಡಿ ಅನುಗ್ರಹಿಸಿದ್ದಾರೆ ಎಂದರು.
ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಶ್ರೀಕಾಂತ ಕೆಮ್ತೂರ್, ಸಂಸ್ಥೆಯ ಜಂಟಿ ಕಾರ್ಯದರ್ಶಿ ಗೋಪಾಲ ಕುಲಕರ್ಣಿ, ಪ್ರಾಚಾರ್ಯ ಮಹೇಂದ್ರ ಜಿ.ಎ., ಅಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.