kslu ಆದರ್ಶ ವಿಶ್ವವಿದ್ಯಾಲಯ ಮಾಡುವ ಪ್ರಯತ್ನ

kslu ಹುಬ್ಬಳ್ಳಿಯ ನವನಗರ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಆವರಣದಲ್ಲಿ ವಿವಿಧ ಕಟ್ಟಡಗಳ ಕಾಮಗಾರಿಗೆ ಬುಧವಾರ ಸಚಿವ ಎಚ್​.ಕೆ. ಪಾಟೀಲ ಭೂಮಿಪೂಜೆ ನೆರವೇರಿಸಿದರು. ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಅರವಿಂದ ಬೆಲ್ಲದ, ಕುಲಪತಿ ಡಾ. ಸಿ. ಬಸವರಾಜು, ಇತರರು ಇದ್ದರು.
kslu ಹುಬ್ಬಳ್ಳಿಯ ನವನಗರ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಆವರಣದಲ್ಲಿ ವಿವಿಧ ಕಟ್ಟಡಗಳ ಕಾಮಗಾರಿಗೆ ಬುಧವಾರ ಸಚಿವ ಎಚ್​.ಕೆ. ಪಾಟೀಲ ಭೂಮಿಪೂಜೆ ನೆರವೇರಿಸಿದರು. ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಅರವಿಂದ ಬೆಲ್ಲದ, ಕುಲಪತಿ ಡಾ. ಸಿ. ಬಸವರಾಜು, ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಎಚ್​.ಕೆ. ಪಾಟೀಲ ಪ್ರಶಂಸೆ
  • ಕಾನೂನು ವಿವಿ ಕಟ್ಟಡ ಅಭಿವೃದ್ಧಿಗೆ ಸ್ವಯಂ ಸಂಪನ್ಮೂಲ
  • ವಿವಿಧ ಕಟ್ಟಡಗಳ ಕಾಮಗಾರಿಗೆ ಭೂಮಿಪೂಜೆ
ಇಲ್ಲಿಯ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕಾನೂನು ಶಾಲೆಯ ಆವರಣದಲ್ಲಿ ವಿವಿಧ ಕಟ್ಟಡಗಳ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ವಿವಿ ಆವರಣದಲ್ಲಿ ಗ್ರಂಥಾಲಯ, ಉಪಾಹಾರ ಗೃಹ, ಅನೆಕ್ಸ್​ ಕಟ್ಟಡ, ಅತಿಥಿ ಗೃಹ ಹಾಗೂ ಬಾಲಕಿಯರ ವಸತಿ ನಿಲಯ ಕಟ್ಟಡಗಳನ್ನು 39 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಈ ಎಲ್ಲ ಕಾಮಗಾರಿಗಳನ್ನು 11 ತಿಂಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಹೇಳಿದರು.
ವಿಶ್ವವಿದ್ಯಾಲಯವು ಸ್ವಂತ ಸಂಪನ್ಮೂಲಗಳಿಂದ ಹಣಕಾಸು ಸಂಗ್ರಹಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿದೆ. ಹಾಗಾಗಿ ಯಾವುದೇ ವಿಳಂಬ ಆಗುವುದಿಲ್ಲ. ಗುತ್ತಿಗೆದಾರರು ಸಹ ತಡಮಾಡದೇ ಕೆಲಸ ಮುಗಿಸಬೇಕು. ಯಾವುದೇ ರೀತಿಯ ತೊಂದರೆಗಳು ಎದುರಾದರೆ ಕೂಡಲೇ ತಮ್ಮನ್ನು ಸಂಪರ್ಕಿಸಲು ತಿಳಿಸಿದರು.
ವಿವಿ ಆಡಳಿತ ಭವನ ಕಟ್ಟಡದ ಜಾಗದ ಬಗ್ಗೆ ಕೆಲ ಗೊಂದಲಗಳು ಮೂಡಿದ್ದವು. ಅವುಗಳನ್ನು ಪರಿಹರಿಸಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಪಾಲಿಕೆ ಜಾಗ ಬಿಟ್ಟು ಕೊಡಬೇಕು. ಮಾಹಿತಿ ಕೊರತೆಯಿಂದ ಕೆಲ ದಿನ ವಿಳಂಬವಾಗಿದೆ. ಕಾಮಗಾರಿಯಲ್ಲಿ ವಿಳಂಬವಾದ ಅವಧಿಯನ್ನು ಸರಿಪಡಿಸಿಕೊಂಡು ಮೇ ತಿಂಗಳಲ್ಲಿ ಕಟ್ಟಡ ಪೂರ್ಣಗೊಳಿಸಬೇಕು. ಜೂನ್​ ತಿಂಗಳಲ್ಲಿ ಶೈಕ್ಷಣಿಕ ವರ್ಷವನ್ನು ಆಡಳಿತ ಭವನದಿಂದ ಆರಂಭಿಸಲು ಯೋಜಿಸಲಾಗಿದೆ ಎಂದು ಸಚಿವರು ಹೇಳಿದರು.
ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಕುಲಪತಿ ಡಾ. ಸಿ. ಬಸವರಾಜು ಸ್ವಾಗತಿಸಿದರು.
ಸಭಾಪತಿ ಬಸವರಾಜ ಹೊರಟ್ಟಿ, ಮೇಯರ್​ ಜ್ಯೋತಿ ಪಾಟೀಲ, ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ್​ ಎಲಿಗಾರ, ಪಾಲಿಕೆ ಸದಸ್ಯರಾದ ನೀಲಮ್ಮಅರವಾಳದ, ಸುನಿತಾ ಮಾಳವದಕರ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭವಾನಿ ನೇರಳೆ.
ಕುಲಸಚಿವೆ ಗೀತಾ ಕೌಲಗಿ, ಮೌಲ್ಯಮಾಪನ ಕುಲಸಚಿವೆ ಡಾ. ರತ್ನಾ ಭರಮಗೌಡರ್​, ಸಿಂಡಿಕೇಟ್​ ಸದಸ್ಯರಾದ ಡಾ. ಟಿ.ವಿ. ಕಟ್ಟಿಮನಿ, ಡಾ. ಎಚ್​.ವಿ. ಬೆಳಗಲಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ವಿ.ಡಿ. ಕಾಮರಡ್ಡಿ, ಚಿದಾನಂದ ಪಾಟೀಲ, ಸ್ಥಾನಿಕ ಅಭಿಯಂತರ ಅಶ್ವಥನಾರಾಯಣ ಹೊನಕೇರಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆರ್​.ಎಂ. ಕುಲಕರ್ಣಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net