ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಸಿ. ಬಸವರಾಜು ಅವರು, ಕಾನೂನು ಕ್ಷೇತ್ರ ಪವಿತ್ರವಾದದ್ದು, ಇಲ್ಲಿರುವವರು ತಾಳ್ಮೆ, ಬದ್ಧತೆ, ಪ್ರಾಮಾಣಿಕತೆ, ಶಿಸ್ತು, ಸಂಯಮ ಮಾನವೀಯ ಮೌಲ್ಯದಂತಹ ಮುತ್ತು ರತ್ನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿನಯವಿಲ್ಲದ ವಿದ್ಯೆ ಶೂನ್ಯ, ಉದ್ವೇಗ ಮತ್ತು ಆವೇಶದಿಂದ ಏನನ್ನೂ ಸಾಧಿಸಲಿಕ್ಕಾಗುವುದಿಲ್ಲ. ತಾಳ್ಮೆ ಮತ್ತು ಸಹನೆಯಿಂದ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂದು ಹೇಳಿದರು.