kslu lecture ವ್ಯಕ್ತಿ ಸ್ವಾತಂತ್ರ್ಯದ ಕಬಳಿಕೆ ನಿಂತಿಲ್ಲ

kslu lecture ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿವಿಯಲ್ಲಿ ಶನಿವಾರ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಿರಿಯ ವಕೀಲ ಸತೀಶ ಮಾನೆಶಿಂಧೆ ಉದ್ಘಾಟಿಸಿದರು. ಡಾ. ಸಿ. ಬಸವರಾಜು, ಡಾ. ರತ್ನಾ ಭರಮಗೌಡರ, ಗೀತಾ ಕೌಲಗಿ ಇದ್ದರು.
kslu lecture ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿವಿಯಲ್ಲಿ ಶನಿವಾರ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಿರಿಯ ವಕೀಲ ಸತೀಶ ಮಾನೆಶಿಂಧೆ ಉದ್ಘಾಟಿಸಿದರು. ಡಾ. ಸಿ. ಬಸವರಾಜು, ಡಾ. ರತ್ನಾ ಭರಮಗೌಡರ, ಗೀತಾ ಕೌಲಗಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಿರಿಯ ವಕೀಲ ಸತೀಶ ಮಾನೆಶಿಂಧೆ ಅಭಿಮತ
  • ಕಾನೂನು ವಿವಿಯಲ್ಲಿ ದತ್ತಿ ಉಪನ್ಯಾಸ
ಅತಿಥಿಯಾಗಿದ್ದ ಬಾಂಬೆ ಹೈಕೋರ್ಟ್​ ಹಿರಿಯ ವಕೀಲ ಸತೀಶ್​ ಮಾನೆ ಶಿಂಧೆ ಮಾತನಾಡಿ, ದೇಶಾದ್ಯಂತ ಸಾವಿರಾರು ಕಾನೂನುಗಳು ಆಚರಣೆಯಲ್ಲಿ ಇದ್ದರೂ ಪ್ರಸ್ತುತ ಸಮಾಜದಲ್ಲಿ, ಸ್ವಾತಂತ್ರ್ಯ ಎಂಬ ಪರಿಕಲ್ಪನೆಯು ಬದಲಾವಣೆ ಆಗಿಲ್ಲ. ಯಾವುದೇ ವಲಯದಲ್ಲಾಗಲಿ ವ್ಯಕ್ತಿ ಸ್ವಾತಂತ್ರ್ಯವು ಕಬಳಿಕೆ ಆಗುತ್ತಿದ್ದು, ಅವುಗಳ ರಕ್ಷಣೆಗೆ ಸಮಂಜಸ ಕಾನೂನು ಇಲ್ಲದಿರುವುದು ಶೋಚನೀಯ ಎಂದರು.
ಭಾರತದ ಸಂವಿಧಾನದಲ್ಲಿ ಹಕ್ಕು ಮತ್ತು ಸ್ವಾತಂತ್ರ್ಯ ಸಮಾನ ಹಂಚಿಕೆ ಆಗಬೇಕು ಹಾಗೂ ಕಾಲಕ್ಕೆ ತಕ್ಕಂತೆ ಸ್ವಾತಂತ್ರ್ಯಗಳನ್ನು ಅನುಭೋಗಿಸುವ ಹಕ್ಕು ಪ್ರತಿಯೊಬ್ಬ ಭಾರತೀಯನಿಗೂ ಸಂವಿಧಾನ ಬದ್ಧ ಹಕ್ಕು ಎಂದು ಡಾ. ಬಿ.ಆರ್​. ಅಂಬೇಡ್ಕರ್​ ಹೇಳಿದ್ದಾರೆ. ನವಯುಗದಲ್ಲಿ ಸ್ವಾತಂತ್ರ್ಯ ಎಂಬುದು ಶ್ರೀಮಂತರ ಕಿಸೆಯಲ್ಲಿನ ವಸ್ತುವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾನೂನು ವಿವಿ ಕುಲಪತಿ ಡಾ. ಸಿ. ಬಸವರಾಜು ಮಾತನಾಡಿ, ಡಾ. ಬಿ.ಆರ್​. ಅಂಬೇಡ್ಕರ್​ ಅವರು ಹೇಳಿರುವಂತೆ, ಸಮಾನತೆ ಇಲ್ಲದ ಸ್ವಾತಂತ್ರ್ಯಕ್ಕೆ ಯಾವುದೇ ಮೌಲ್ಯ ಇರುವುದಿಲ್ಲ. ಶ್ರೀಮಂತರು ಅವರ ಹಣಕಾಸಿನ ಸ್ಥಾನಮಾನದಿಂದ ಕಳೆದುಕೊಂಡ ಸ್ವಾತಂತ್ರ್ಯವನ್ನು ಮತ್ತೆ ಪಡೆಯಬಲ್ಲರು. ಆದರೆ ಈ ದೇಶದಲ್ಲಿನ ರ್ದುಬಲ ವರ್ಗದ ಜನರು ಹಾಗೂ ಹಿಂದುಳಿದವರಿಗೆ ಸ್ವಾತಂತ್ರ್ಯವೂ ಕೈಗೆಟುಕದ ನಕ್ಷತ್ರವಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net