ಹುಬ್ಬಳ್ಳಿ: ಭಾವಸಾರ ಕ್ಷತ್ರೀಯ ಸಮಾಜ ಪಾನ್‌ಬಜಾರ್ ಟ್ರಸ್ಟ್
krishna janmastami
ವತಿಯಿಂದ ಇಲ್ಲಿಯ ಪಾನ್‌ಬಜಾರ್‌ನ ಶ್ರೀ ವಿಠ್ಠಲ ಹರಿಮಂದಿರದಲ್ಲಿ ಸೆ. 1ರಿಂದ 5 ರವರೆಗೆ ಶ್ರೀ ಜ್ಞಾನೇಶ್ವರಿ ಪಾರಾಯಣ, ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ದಿಂಡಿ ಉತ್ಸವದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಪ್ರತಿದಿನ 5 ದಿನಗಳ ಕಾಲ ಬೆಳಗ್ಗೆ 7.30ರಿಂದ 9.15ರವರೆಗೆ ಶ್ರೀ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ನಡೆಯಲಿದೆ. ಹುಬ್ಬಳ್ಳಿಯ ಶ್ರೀ ವೆಂಕಟೇಶರಾವ್ ಪಿಸೆ ಕುಟುಂಬದವರು ನೇತೃತ್ವವ ವಹಿಸುವರು. ಸೆ. 3ರಂದು ಬೆಳಗ್ಗೆ 11ಕ್ಕೆ ಪೋತಿ ಸ್ಥಾಪನೆ, ಶ್ರೀ ಬಾನುದಾಸ ಅಂಬರೀಶ ಸರ್ವದೆ ಮಹಾರಾಜರಿಂದ ಕೀರ್ತನೆ, ಶ್ರೀ ಸುಬ್ಬಣ್ಣ ಅಂಬರೀಶ ಸರ್ವದೆ ಅವರಿಂದ ಮೃದಂಗ ಸೇವೆ, ನಂತರ ಪ್ರಸಾದ ವಿತರಣೆ ಜರುಗಲಿದೆ.
4ರಂದು ರಾತ್ರಿ 10ರಿಂದ 12ರವರೆಗೆ ಪಾನ್‌ಬಜಾರ್ ಘಟಕದ ಮಹಿಳಾ ಮಂಡಳದವರಿಂದ ಭಜನೆ, ರಾತ್ರಿ 12ರ ನಂತರ ಶ್ರೀಕೃಷ್ಣನ ತೊಟ್ಟಿಲೋತ್ಸವ ನಡೆಯಲಿದೆ. 5ರಂದು ಬೆಳಗ್ಗೆ 7.30ರಿಂದ 9.15ರವರೆಗೆ ಶ್ರೀ ಜ್ಞಾನೇಶ್ವರಿ ಪಾರಾಯಣ, ಸಾಂಗತಾ ಭಜನೆ, ಸಸಂಜೆ 4ರಿಂದ ಶ್ರೀ ಗೋವಿಂದರಾವ್ ಮಾಂಡ್ರೆ ನೇತೃತ್ವದಲ್ಲಿ ವಾರಕರಿ ಮಂಡಳಿ ಮತ್ತು ಸಮಾಜದವರಿಂದ ದಿಂಡಿ ಉತ್ಸವ, ಬೃಹತ್ ಶೋಭಾಯಾತ್ರೆ ನಡೆಯಲಿದೆ. ಯಾತ್ರೆಯು ಶ್ರೀವಿಠ್ಠಲ ಹರಿಮಂದಿರದಿಂದ ಪ್ರಾರಂಭವಾಗಿ ಜವಳಿಸಾಲ, ಬೆಳಗಾಂ ಗಲ್ಲಿ, ಸರಾಫ್‌ಗಟ್ಟಿ ಮೂಲಕ ರಾತ್ರಿ 9ಕ್ಕೆ ತಲುಪಲಿದೆ. ನಂತರ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.