Yoga ಯೋಗ ಸಾಧಕರಿಗೆ ಕ್ರೀಡಾ ರತ್ನ ಪ್ರಶಸ್ತಿ

Yoga ಬೆಂಗಳೂರಿನಲ್ಲಿ ಕ್ರೀಡಾ ರತ್ನ ಪ್ರಶಸ್ತಿ ಸ್ವೀಕರಿಸಿದ ಮೊಹಮ್ಮದ ಫಿರೋಜ್​ ಶೇಖ್​, ವಿನಾಯಕ ಕೊಂಗಿ ಅವರಿಗೆ ಯೋಗಗುರು ಭವರಲಾಲ್​ ಆರ್ಯ ಅಭಿನಂದಿಸಿದರು.
Yoga ಬೆಂಗಳೂರಿನಲ್ಲಿ ಕ್ರೀಡಾ ರತ್ನ ಪ್ರಶಸ್ತಿ ಸ್ವೀಕರಿಸಿದ ಮೊಹಮ್ಮದ ಫಿರೋಜ್​ ಶೇಖ್​, ವಿನಾಯಕ ಕೊಂಗಿ ಅವರಿಗೆ ಯೋಗಗುರು ಭವರಲಾಲ್​ ಆರ್ಯ ಅಭಿನಂದಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂತಸದಲ್ಲಿ ಯೋಗ ಬಂಧುಗಳು
  • ಕ್ರೀಡಾಪಟುಗಳಿಗೆ ಪ್ರೇರಣೆ ನೀಡಿದ ಮುಖ್ಯಮಂತ್ರಿ
  • 2 ಲಕ್ಷ ರೂಪಾಯಿ ನಗದು ಪುರಸ್ಕಾರ
ಹುಬ್ಬಳ್ಳಿ: Yoga ಯೋಗಾಸನ ಕರ್ನಾಟಕ ಸಂಸ್ಥೆಯ ಹೆಮ್ಮೆಯ ಕ್ರೀಡಾಪಟುಗಳಾದ ಬೆಂಗಳೂರಿನ ಮೊಹಮ್ಮದ್​ ಫಿರೋಜ್​ ಶೇಖ್​ ಹಾಗೂ ಹುಬ್ಬಳ್ಳಿಯ ವಿನಾಯಕ ಕೊಂಗಿ ಅವರಿಗೆ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಲಭಿಸಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಯೋಗ ಕ್ಷೇತ್ರದ ಸಾಧಕರಿಗೂ ನೀಡಿರುವುದಕ್ಕೆ ಎಲ್ಲೆಡೆ ಸಂತಸ ವ್ಯಕ್ತವಾಗಿದೆ.
36ನೇ ನ್ಯಾಷನಲ್​ ಗೇಮ್ಸ್​ನಲ್ಲಿ ಚಿನ್ನದ ಪದಕ, ನ್ಯಾಷನಲ್​ ಯೋಗಾಸನ ಸ್ಪೋರ್ಟ್ಸ್​ ಫೆಡರೇಶನ್​ನಿಂದ ಎರಡು ಬಾರಿ ಚಿನ್ನದ ಪದಕವನ್ನು ಮೊಹಮ್ಮದ ಫಿರೋಜ್​ ಪಡೆದಿದ್ದಾರೆ. ವಿನಾಯಕ ಕೊಂಗಿ ಅವರು 3 ಮತ್ತು 4ನೇ ಸೀನಿಯರ್​ ನ್ಯಾಷನಲ್​ ಯೋಗಾಸನ ಸ್ಪೋರ್ಟ್ಸ್​ ಚಾಂಪಿಯನ್​ ಶಿಪ್​ನಲ್ಲಿ ಎರಡು ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಕ್ರೀಡಾ ರತ್ನ ಪ್ರಶಸ್ತಿ ಮತ್ತು 2 ಲಕ್ಷ ರೂಪಾಯಿ ನಗದು ಪುರಸ್ಕಾರ ನೀಡಿ ಗೌರವಿಸಿದ್ದಾರೆ.
ಒಲಿಂಪಿಕ್ಸ್​ನಲ್ಲಿ ರಾಜ್ಯದ ಕ್ರೀಡಾಪಟುಗಳು ಚಿನ್ನದ ಪದಕ ಗೆದ್ದರೆ 6 ಕೋಟಿ ರೂ, ಬೆಳ್ಳಿ ಪದಕ ಗೆದ್ದರೆ 4 ಕೋಟಿ ಮತ್ತು ಕಂಚಿನ ಪದಕ ಗೆದ್ದರೆ 2 ಕೋಟಿ ರೂಪಾಯಿ ಬಹುಮಾನ ನೀಡಿ ಗೌರವಿಸಲಾಗುವುದು.
ಮತ್ತು ಸರ್ಕಾರಿ ಕೆಲಸ ನೀಡಲಾಗುವುದು ಎಂದು ಘೋಷಣೆ ಮಾಡಿ ಕ್ರೀಡಾಪಟುಗಳಿಗೆ ಪ್ರೇರಣೆ ನೀಡಿದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಯೋಗಗುರುಗಳು ಹೇಳಿದ್ದಾರೆ.
"

ಯೋಗಾಸನ ಭಾರತ ಸಂಸ್ಥೆಗೆ ಮೊದಲ ಬಾರಿ ಈ ಪ್ರಶಸ್ತಿ ಸಿಕ್ಕಿದ್ದು ಕರ್ನಾಟಕದ ಎಲ್ಲ ಯೋಗ ಸಾಧಕರಿಗೆ, ಯೋಗಾಸಕ್ತರಿಗೆ, ಯೋಗಪಟುಗಳಿಗೆ ತುಂಬಾ ಸಂತೋಷವನ್ನು ಉಂಟುಮಾಡಿದೆ. ಈ ಪ್ರಶಸ್ತಿಯು ರಾಜ್ಯದ ಎಲ್ಲ ಯೋಗಪಟುಗಳಿಗೆ ಪ್ರೇರಣೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net