kps parliament ನವನಗರ ಕೆಪಿಎಸ್​ ಸಂಸತ್​ ರಚನೆ

kps parliament ಹುಬ್ಬಳ್ಳಿಯ ನವನಗರ ಕೆಪಿಎಸ್​ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್​ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಾಯಿತು. ಎಸ್​.ಎಸ್​. ಹರಕುಣಿ, ಶಕುಂತಲಾ ಗಡೆಂಕನಹಳ್ಳಿ, ಶಾರದಾ ವೈ.ಕೆ., ಜೆ.ಎಸ್​. ಗರಸಂಗಿ, ಶಾರದಾ ಡಂಬಳ, ಇತರರು ಇದ್ದರು.
kps parliament ಹುಬ್ಬಳ್ಳಿಯ ನವನಗರ ಕೆಪಿಎಸ್​ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್​ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಾಯಿತು. ಎಸ್​.ಎಸ್​. ಹರಕುಣಿ, ಶಕುಂತಲಾ ಗಡೆಂಕನಹಳ್ಳಿ, ಶಾರದಾ ವೈ.ಕೆ., ಜೆ.ಎಸ್​. ಗರಸಂಗಿ, ಶಾರದಾ ಡಂಬಳ, ಇತರರು ಇದ್ದರು.
Published on

ಹುಬ್ಬಳ್ಳಿ:

kps parliament

ಇಲ್ಲಿಯ ನವನಗರ ಕುವೆಂಪು ರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್​ ಸ್ಕೂಲ್​ (ಪ್ರೌಢಶಾಲೆ ವಿಭಾಗ) ಶಾಲಾ ಸಂಸತ್​ ಉದ್ಘಾಟನೆ ಹಾಗೂ ಸದಸ್ಯರ ಪದಗ್ರಹಣ ಸಮಾರಂಭ ಶನಿವಾರ ಜರುಗಿತು.

ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕ ಎಸ್​.ಎಸ್​. ಹರಕುಣಿ ಅವರು, ಸಂಸತ್​ ಸದಸ್ಯರಿಗೆ ಅವರ ಕಾರ್ಯಚಟುವಟಿಕೆಗಳ ಬಗ್ಗೆ ಮಾರ್ಗದರ್ಶನ ನೀಡಿದರು.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ತಿಳಿಸಿ ಕೊಡುವ ಮಹತ್ವದ ಉದ್ದೇಶ ಶಾಲಾ ಸಂಸತ್​ ಹಿಂದೆ ಅಡಗಿದೆ ಎಂದು ತಿಳಿಸಿದರು.
ಐಬಿಎಂಆರ್​ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಶಾರದಾ ಡಂಬಳ ಅವರು ವಿದ್ಯಾರ್ಥಿಗಳಿಗೆ ಬ್ಯಾಡ್ಜ್​ ವಿತರಣೆ ಮಾಡಿ ಮಾತನಾಡಿ, ಮಕ್ಕಳು ಶಿಸ್ತು, ಸಂಯಮ, ಸಹೋದರತ್ವ ಗುಣ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಚುನಾವಣಾ ಸಾಕ್ಷರತಾ ಕ್ಲಬ್​ನ ನೋಡಲ್​ ಅಧಿಕಾರಿ ಶಕುಂತಲಾ ಗಡೆಂಕನಹಳ್ಳಿ ಅವರು ನೂತನ ಸದಸ್ಯರಾದ ಪ್ರಧಾನ ಮಂತ್ರಿ ಗಣೇಶ ಢವಳೇಶ್ವರ, ಮಹಿಳಾ ಪ್ರತಿನಿಧಿ ಯಶೋಧಾ ಹುಲಮನಿ, ಪ್ರಾರ್ಥನಾ ಮಂತ್ರಿ ಮಹಾಂತೇಶ ಮಾತಾರಿ, ಆರೋಗ್ಯ ಮಂತ್ರಿ ಪ್ರಿಯಾ ಅಗಸಿಮನಿ, ಕ್ರೀಡಾ ಮಂತ್ರಿ ಹರೀಶ ಚವ್ಹಾಣ.
ಪ್ರವಾಸ ಮಂತ್ರಿ ನೀಲಕಂಠಯ್ಯ ಕೊಪ್ಪಯ್ಯನವರ, ಗ್ರಂಥಾಲಯ ಮಂತ್ರಿ ರೇಣುಕಾ ನವಲಗುಂದ, ವಿಜ್ಞಾನ ಪರಿಸರ ಮಂತ್ರಿ ಕೀರ್ತನ ಲಮಾಣಿ, ಶಿಕ್ಷಣ ಮಂತ್ರಿ ಸೌಮ್ಯ ಕಂತಿ, ಆಹಾರ ಮಂತ್ರಿ ಪ್ರೀತಿ ಅಕ್ಕಿ, ಸಾಂಸತಿಕ ಮಂತ್ರಿ ದಿವ್ಯಾ ಶಿಂಧೆ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಶಿಕ್ಷಕರಾದ ಸಿ.ಪಿ. ಪಾಟೀಲ, ವಿ.ಜಿ. ಸಮನಿ, ಜೆ.ಎಸ್​. ಗರಸಂಗಿ ಎಸ್​.ಎಂ. ರಾಂಪೂರ, ಶಾರದಾ​.ವೈ.ಕೆ, ಜೆ.ಎಚ್​. ಮಡಿವಾಳಿ, ಸೀತಮ್ಮ ಶಿರಿಯಣ್ಣವರ, ವಿ.ಕೆ. ದೇಸಾಯಿ, ಐಬಿಎಂಆರ್​ ಕಾಲೇಜಿನ ಪ್ರಶಿಕ್ಷಣಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net