(koppa) ಹಿಂದು ಧರ್ಮದಲ್ಲಿ ಮುಕ್ತ ಸ್ವಾತಂತ್ರೃ

ಹುಬ್ಬಳ್ಳಿಯ ಸಪ್ನ ಬುಕ್ ಹೌಸ್‌ನಲ್ಲಿ ಏರ್ಪಡಿಸಿದ್ದ ‘ದಂಗೆಯ ದಿನಗಳು’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಲೇಖಕ ಜಗದೀಶ ಕೊಪ್ಪ (koppa) ಮಾತನಾಡಿದರು.
ಹುಬ್ಬಳ್ಳಿಯ ಸಪ್ನ ಬುಕ್ ಹೌಸ್‌ನಲ್ಲಿ ಏರ್ಪಡಿಸಿದ್ದ ‘ದಂಗೆಯ ದಿನಗಳು’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಲೇಖಕ ಜಗದೀಶ ಕೊಪ್ಪ (koppa) ಮಾತನಾಡಿದರು.
Published on
ಹುಬ್ಬಳ್ಳಿ: ಹಿಂದು ಧರ್ಮದಲ್ಲಿ ಮುಕ್ತ ಸ್ವಾತಂತ್ರೃವಿದೆ. ಋಣಾತ್ಮಕ ವಿಶ್ಲೇಷಣೆಗಿಂತ ಧನಾತ್ಮಕತೆಗೆ ಹೆಚ್ಚು ಪಾಧ್ಯಾನ್ಯತೆ ಕೊಡುವ ಅಗತ್ಯವಿದೆ ಎಂದು ಲೇಖಕ ಹಾಗೂ ಹಿರಿಯ ಪತ್ರಕರ್ತ ಡಾ. ಜಗದೀಶ ಕೊಪ್ಪ (koppa) ಅವರು ಅಭಿಪ್ರಾಯಪಟ್ಟರು.
ಇಲ್ಲಿಯ ಕೊಯಿನ್ ರಸ್ತೆಯ ಲಕ್ಷ್ಮೀ ಮಾಲ್‌ನಲ್ಲಿರುವ ಸಪ್ನ ಬುಕ್ ಹೌಸ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ‘ದಂಗೆಯ ದಿನಗಳು’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ತಮ್ಮದೇ ಕೃತಿಯ ಕುರಿತು ಅವರು ಮಾತನಾಡಿದರು.
ಹಿಂದು ಧರ್ಮದಲ್ಲಿ ವಿರೋಧ-ಅಪೇಕ್ಷೆಗಳೆರಡೂ ಇದ್ದು, ಮುಕ್ತ ಅಭಿಪ್ರಾಯಕ್ಕೆ ಪ್ರಾಧಾನ್ಯತೆ ಸಿಗುತ್ತಿದೆ. ಈ ಧರ್ಮದಂತೆ ಬೇರೆ ಯಾವ ಧರ್ಮದಲ್ಲೂ ಇಷ್ಟೊಂದು ರೀತಿಯಲ್ಲಿ ಸ್ವಾತಂತ್ರೃವಿಲ್ಲ ಎಂದರು.
ಪ್ರತಿ ಗ್ರಾಮ, ಜಿಲ್ಲೆಯಲ್ಲಿಯೂ ಪ್ರತಿರೋಧ ಮನೋಭಾವ ಇರುತ್ತದೆ. ಅಲ್ಲಿಯ ಸಾಮಾಜಿಕ ಅಸಮತೋಲನೆ, ಪದ್ಧತಿ ವಿರುದ್ಧ ಧ್ವನಿ ಎತ್ತಲಾಗುತ್ತದೆ. ಈ ರೀತಿಯ ಒಟ್ಟು ಗೂಡಿದ ವಿಷಯವೇ ‘ದಂಗೆಯ ದಿನಗಳು’ ಕೃತಿಯಿಂದ ಹೊರ ತರಲಾಗಿದೆ ಎಂದರು.
ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಮಹಾರಾಷ್ಟ್ರ ಸೇರಿ ಇತರ ರಾಜ್ಯಗಳಲ್ಲಿ ಇಂಥ ದಂಗೆಗಳು ನಡೆದಿವೆ. ಭಕ್ತ ಪಂಥ, ಚಾರ್ವಾಕ ದರ್ಶನ ಹೀಗೆ ಹತ್ತು ಹಲವು ವಿಷಯಗಳು ಲೇಖನಗಳಾಗಿ ಪರಿವರ್ತನೆಗೊಂಡಿವೆ. ಚಾರ್ವಾಕ ದರ್ಶನವು ಗೌತಮ ಬುದ್ಧನ ಮೇಲೆ ಪರಿಣಾಮ ಬೀರಿತು. ಪ್ರತಿಯೊಂದನ್ನೂ ದಾಖಲೆಯಾಗಿ ಇಟ್ಟುಕೊಂಡು ಸಂಶೋಧನಾತ್ಮಕ ರೀತಿಯಲ್ಲಿ ಅಕ್ಷರ ರೂಪಕ್ಕೆ ಇಳಿಸಲಾಗಿದೆ ಎಂದರು.
ಸಪ್ನ ಬುಕ್ ಹೌಸ್ ಹುಬ್ಬಳ್ಳಿ ಶಾಖೆ ಮುಖ್ಯಸ್ಥ ಎಂ.ವಿ. ರಘು ಮಾತನಾಡಿ, ಈ ಕೃತಿಯು ಸಂಶೋಧನಾತ್ಮಕವಾಗಿ ಹೊರ ಬಂದಿದೆ. ಇದಕ್ಕೆ ಪ್ರಶಸ್ತಿ ಸಿಕ್ಕೇ ಸಿಗಲಿದೆ. ಅಲ್ಲದೇ ಪಠ್ಯವಾಗಿಯೂ ವಿದ್ಯಾರ್ಥಿಗಳು ಅಭ್ಯಾಸ ಮಾಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಓದುಗರಾದ ವೆಂಕಟೇಶ ಮಾಚಕನೂರ, ಲಕ್ಷ್ಮೀಕಾಂತ ಇಟ್ನಾಳ, ಶಿಲ್ಪಾ ಶೆಟ್ಟರ್, ಕೋಡಿ ಗೌಡ್ರ ಕೃತಿ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡರು.
ಸಪ್ನ ಬುಕ್ ಹೌಸ್ ಹುಬ್ಬಳ್ಳಿ ಶಾಖೆಯ ಸಹಾಯಕ ವ್ಯವಸ್ಥಾಪಕಿ ಮೇಘನಾ ರಘು ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net