ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸ್ಥಿ ಮತ್ತು ಕೀಲು ಬದಲಿ ಶಸ್ತ್ರಚಿಕಿತ್ಸಕ ಹಾಗೂ ವಿಭಾಗದ ಮುಖ್ಯಸ್ಥ ಡಾ. ಬಸವರಾಜ ಸಿ.ಎಂ., ನನ್ನ ನೇತೃತ್ವದಲ್ಲಿ ತಜ್ಞರ ತಂಡವು ಸಾಮಾನ್ಯ ಹಿಪ್ ರಿಪ್ಲೇಸ್‌ಮೆಂಟ್ ಈ ರೋಗಿಗೆ ಸೂಕ್ತ ಪರಿಹಾರವಲ್ಲ ಎಂದು ನಿರ್ಧರಿಸಿತು. ಅಸ್ಥಿ ಚಿಕಿತ್ಸಾ ಕ್ಷೇತ್ರದಲ್ಲಿನ ಅತ್ಯಾಧುನಿಕ ತಂತ್ರಜ್ಞಾನವಾದ ರೋಗಿಗೆ ತಕ್ಕಂತೆ ವಿನ್ಯಾಸಗೊಳಿಸಿದ 3ಡಿ ಪ್ರಿಂಟೆಡ್ ಟೈಟಾನಿಯಂ ಇಂಪ್ಲಾಂಟ್ ಅನ್ನು ಬಳಸಲು ನಿರ್ಧರಿಸಲಾಯಿತು ಎಂದರು.