ಹುಬ್ಬಳ್ಳಿ: ರಕ್ತಹೀನತೆ, ತಲೇಸೀಮಿಯಾ, ಹಿಮೋಗ್ಲೋಬಿನ್ ಕೊರತೆ... ಹೀಗೆ ಹತ್ತು ಹಲವು ಸಮಸ್ಯೆ ಹಿಡಿದುಕೊಂಡು ಆಸ್ಪತ್ರೆಗಳಿಗೆ ಅಲೆದಾಡಿದ್ದಳು ಮಹಿಳೆ. ಅದೂ ಒಬ್ಬಾಕೆಯಲ್ಲ, ಹೊಟ್ಟೆಯಲ್ಲಿ ಮೃತಪಟ್ಟ 7 ತಿಂಗಳ ಮಗು ಹೊತ್ತುಕೊಂಡು. ಕೊನೆಗೆ ಆಕೆ ಬಂದು ಚಿಕಿತ್ಸೆ ಪಡೆದಿದ್ದು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಯಲ್ಲಿ KMCRI (ಕೆಎಂಸಿಆರ್‌ಐ).