ಹುಬ್ಬಳ್ಳಿ: kle hpv ಕೆಎಲ್ಇ ಸಂಸ್ಥೆಯ ಎಚ್ಪಿವಿ ವ್ಯಾಕ್ಸಿನೇಷನ್ ಅಭಿಯಾನದ ಮೊದಲ ಹಂತ ಯಶಸ್ವಿಯಾಗಿ ಪೂರ್ಣಗೊಂಡಿತು.
ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆಂಡ್ ರೀಸರ್ಚ್ ಕುಲಪತಿ ಡಾ. ಪ್ರಭಾಕರ ಕೋರೆ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಕೆಎಲ್ಇ ಮತ್ತು ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಗಳ ಸಂಯೋಜಕಿ ಡಾ. ಪ್ರೀತಿ ದೊಡ್ಡವಾಡ ನೇತೃತ್ವದಲ್ಲಿ ಈ ಉಪಕ್ರಮಗಳನ್ನು ಕೈಗೊಳ್ಳಲಾಯಿತು.
ಬೆಳಗಾವಿಯ ಜೆಎನ್ಎಂಸಿ ಸ್ತ್ರೀರೋಗ ತಜ್ಞೆ ಡಾ. ಸ್ವಾತಿ ಗೌಡರ, ಪ್ರಾಧ್ಯಾಪಕ ಡಾ. ಜ್ಞಾನೇಶ ಕಾಂಬಳೆ, ಡಾ. ಶ್ರೀಹರ್ಷ ಬಡಿಗೇರ ಅವರ ಮಾರ್ಗದರ್ಶನದಲ್ಲಿ ಬೆಳಗಾವಿ ನಗರ, ಹುಬ್ಬಳ್ಳಿ, ಧಾರವಾಡ, ನಿಪ್ಪಾಣಿ, ಚಿಕ್ಕೋಡಿ ಮತ್ತು ಅಂಕಲಿಯ 9 ಕೆಎಲ್ಇ ಸೊಸೈಟಿ ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ದೀಪ್ತಿ ಕೋರೆ ಮತ್ತು ಬೆಂಗಳೂರಿನ ಗುಲಾಬ್ ಸೇವಾ ಫೌಂಡೇಷನ್ನವರು ಈ ಕಾರ್ಯಕ್ರಮಕ್ಕೆ ಬೆಂಬಲಿಸಿದರು. ವ್ಯಾಕ್ಸಿನೇಷನ್ ಅನ್ನು ವಯಸ್ಸಿಗೆ ಸೂಕ್ತವಾದ ಡೋಸಿಂಗ್ ವೇಳಾಪಟ್ಟಿಗಳ ಪ್ರಕಾರ ನಿರ್ವಹಣೆ ಮಾಡಲಾಯಿತು. 488 ಹುಡುಗಿಯರು, 29 ಹುಡುಗರು ಮತ್ತು 72 ವಯಸ್ಕ ಮಹಿಳೆಯರನ್ನು ಒಳಗೊಂಡಂತೆ ಒಟ್ಟು 589 ಫಲಾನುಭವಿಗಳನ್ನು ಎಚ್ಪಿವಿ ಲಸಿಕೆಗಾಗಿ ಆಯ್ಕೆ ಮಾಡಲಾಯಿತು.
ಲಸಿಕೆ ಅವಧಿಗಳನ್ನು ಬೆಳಗಾವಿಯ ಕೆಎಲ್ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕಿಯ ಸಂಶೋಧನಾ ಕೇಂದ್ರ ಮತ್ತು ಹುಬ್ಬಳ್ಳಿಯ ಕೆಎಲ್ಇ ಜೆಜಿಎಂಸಿ ಆಸ್ಪತ್ರೆ ಆವರಣದಲ್ಲಿ ನಡೆಸಲಾಯಿತು.