kle fest ಬಿವಿಬಿಗೆ ಬರುತ್ತಿದ್ದಾರೆ ದೇಶದ ವಿವಿಧೆಡೆಯ ವಿದ್ಯಾರ್ಥಿಗಳು

kle fest ಪ್ಲೀಡಿಸ್ ಫೆಸ್ಟ್ ಉತ್ಸವದ ಮಾಹಿತಿ ಪತ್ರಿಕೆ.
kle fest ಪ್ಲೀಡಿಸ್ ಫೆಸ್ಟ್ ಉತ್ಸವದ ಮಾಹಿತಿ ಪತ್ರಿಕೆ.
Published on

ಪ್ರಮುಖ ಮುಖ್ಯಾಂಶಗಳು

  • ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪ್ಲೀಡಿಸ್​
  • ರಾಷ್ಟ್ರ ಮಟ್ಟದ ತಂತ್ರಜ್ಞಾನ ಸಾಂಸ್ಕೃತಿಕ ಉತ್ಸವ
ಹುಬ್ಬಳ್ಳಿ: kle fest ಇಲ್ಲಿಯ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ವತಿಯಿಂದ ರಾಷ್ಟ್ರೀಯ ಮಟ್ಟದ ತಂತ್ರಜ್ಞಾನ- ಸಾಂಸ್ಕೃತಿಕ ಉತ್ಸವ ಪ್ಲೀಡಿಸ್​ 26 ಅನ್ನು ಮೇ 8ರಿಂದ 10ರ ವರೆಗೆ ವಿದ್ಯಾನಗರದ ಬಿವಿಬಿ ಆವರಣದಲ್ಲಿ ಆಯೋಜಿಸಲಾಗಿದೆ.
ಸಂಸ್ಥಾಪಕರಾದ ಬಿ.ವಿ. ಭೂಮರಡ್ಡಿ ಅವರ 141ನೇ ಜಯಂತಿಯ ಸ್ಮರಣಾರ್ಥ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮೂರು ದಿನಗಳ ಉತ್ಸವದಲ್ಲಿ ದೇಶದಾದ್ಯಂತ ವಿದ್ಯಾರ್ಥಿಗಳು, ಉದ್ಯಮಿಗಳು, ಕಲಾವಿದರು ಮತ್ತು ಉದ್ಯಮ ನಾಯಕರು ಒಂದೇ ವೇದಿಕೆಯಲ್ಲಿ ಸೇರಿ ಅವರ ಶಿಕ್ಷಣ ಮತ್ತು ಸೇವೆಯನ್ನು ಸ್ಮರಿಸಲಿದ್ದಾರೆ.
ಪ್ಲೀಡಿಸ್​ ಉತ್ಸವವು ಕಲಿಕೆ, ಸ್ಪರ್ಧೆ, ಸಂಸ್ಕೃತಿ ಮತ್ತು ಸಂಭ್ರಮದ ಅಪೂರ್ವ ಸಂಗಮವಾಗಿ ರೂಪುಗೊಂಡಿದೆ. 13ಕ್ಕೂ ಹೆಚ್ಚು ಚಾಲೆಂಜ್​ ಲೀಗ್​ ಸ್ಪರ್ಧೆಗಳು, ಸ್ಪಿಂಟ್​ ಕಾರ್ಯಾಗಾರಗಳು, ಸ್ಪಾಟ್​ಲೈಟ್​ ಉಪನ್ಯಾಸಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪೆವಿಲಿಯನ್​ಗಳು ಒಂದೇ ಸೂರಿನಡಿ ನಡೆಯಲಿವೆ.
ಉತ್ಸವದಲ್ಲಿ 8 ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಎಲ್ಲ ಸ್ಪರ್ಧೆಗಳಲ್ಲಿ ವಿಜೇತರಿಗೆ 5ಲಕ್ಷಕ್ಕೂ ಹೆಚ್ಚಿನ ಬಹುಮಾನ ನೀಡಲಾಗುತ್ತಿದೆ.
ಮೇ 8ರಂದು ಕೆಎಲ್​ಇ ಟೆಕ್​ ಸಭಾಂಗಣದಲ್ಲಿ ಉತ್ಸವ ಆರಂಭಗೊಳ್ಳಲಿದ್ದು, ಸೇನಾ ನಿವೃತ್ತ ಅಧಿಕಾರಿ, ನಾಯಕತ್ವ ತರಬೇತುದಾರ ಕರ್ನಲ್​ ರಾಜೀವ್​ ಭಾರ್ಗವ್​ ಕಾರ್ಯಾಗಾರ ನಡೆಸಲಿದ್ದಾರೆ.
ಮೇ 10ರಂದು ಎರಡು ಅವಧಿಗಳೊಂದಿಗೆ ಸ್ಪ್ರಿಂಟ್​ ಕಾರ್ಯಾಗಾರಗಳು ಸಮಾಪ್ತಿಗೊಳ್ಳಲಿವೆ. ಮುಂದೆ ಬನ್ನಿ ಸಂಸ್ಥಾಪಕ ವಸಂತ ಶೆಟ್ಟಿ ಅವರು ಕೃತಕ ಬುದ್ಧಿಮತ್ತೆಯ ಯುಗದಲ್ಲಿ ನಿರ್ಮಾಣ ಎಂಬ ಸ್ಟಾರ್ಟಪ್​ ಕೇಂದ್ರಿತ ಕಾರ್ಯಾಗಾರ ನಡೆಸಲಿದ್ದಾರೆ.
ಜಿಮ್ಖಾನಾ ಮೈದಾನದಲ್ಲಿ ಸಾಂಸ್ಕೃತಿಕ ಸಂಜೆ ನಡೆಯಲಿವೆ. ಮೊದಲ ದಿನ ಆರ್ಕೆಸ್ಟ್ರಾ ಮತ್ತು ಎಲೆಕ್ಟ್ರಾನಿಕ್​ ಸಮ್ಮಿಲನದ ಸಿಂಫನಿ; ಎರಡನೇ ದಿನ ಭಾರತದ ಜನಪ್ರಿಯ ಗಾಯಕಿ ಮೋನಾಲಿ ಠಾಕೂರ್​ ಅವರ ಅವಿಸ್ಮರಣೀಯ ಲೈವ್​ ಕಾರ್ಯಕ್ರಮ, ಮೂರನೇ ದಿನ ಸಮಾರೋಪ ಸಂಜೆ ಸ್ಪೆಕ್ಟ್ರಮ್​ ಏರ್ಪಡಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net